ADVERTISEMENT

ಹೊಸಕೋಟೆಯಲ್ಲಿ 6,710 ಯುವ ಮತದಾರರು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 15:54 IST
Last Updated 21 ಮಾರ್ಚ್ 2024, 15:54 IST
ಹೊಸಕೋಟೆ ತಾಲ್ಲೂಕು ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಆರ್‌ಒ ಕಿಶನ್ ಕಲಾಲ್ ಮಾತನಾಡಿದರು. ತಹಶೀಲ್ದಾರ್ ವಿಜಯ್‌ಕುಮಾರ್ ಇದ್ದರು
ಹೊಸಕೋಟೆ ತಾಲ್ಲೂಕು ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಆರ್‌ಒ ಕಿಶನ್ ಕಲಾಲ್ ಮಾತನಾಡಿದರು. ತಹಶೀಲ್ದಾರ್ ವಿಜಯ್‌ಕುಮಾರ್ ಇದ್ದರು   

ಹೊಸಕೋಟೆ: ಲೋಕಸಭಾ ಚುನಾವಣೆಯನ್ನು ಸುಸೂತ್ರವಾಗಿ ನಡೆಸಲು ಕಟ್ಟುನಿಟ್ಟಿನ ಕ್ರಮ ಹಮ್ಮಿಕೊಳ್ಳಲಾಗಿದೆ. ಯಾವುದೇ ಸಮಸ್ಯೆಗೂ ಅಸ್ಪದ ನೀಡದೆ ಚುನಾವಣೆ ನಡೆಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿ ಕಿಶನ್ ಕಲಾಲ್ ಅವರು ತಿಳಿಸಿದರು.

ಗುರುವಾರ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲ್ಲೂಕಿನಾದ್ಯಂತ ಒಟ್ಟು 293 ಮತಗಟ್ಟೆಗಳಿವೆ.  2,37,259 ಮತದಾರರು ಮತ ಚಲಾವಣೆ ಮಾಡಲಿದ್ದಾರೆ. ಅದರಲ್ಲಿ 1,17,821 ಪುರುಷರು, 1,19,687 ಮಹಿಳಾ ಮತದಾರರು ಮತ್ತು 21 ಇತರೆ ಮತದಾರರು ಇದ್ದಾರೆ.

ಈ ಬಾರಿ 3,652 ಪುರುಷರು, 3,058 ಮಹಿಳೆಯರು ಸೇರಿದಂತೆ ಒಟ್ಟು 6,710 ಯುವ ಮತದಾರರು ಇದೇ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ ಎಂದು ತಿಳಿಸಿದರು.

ADVERTISEMENT

ಈ ಬಾರಿ 85 ವರ್ಷ ದಾಟಿದ 314 ಮತದಾರರು ಮತದಾನ ಮಾಡಲಿದ್ದಾರೆ. ಅದರಲ್ಲಿ 135 ಪುರುಷರು, 179 ಮಹಿಳೆಯರು ಸೇರಿದ್ದಾರೆ ಎಂದು ತಿಳಿಸಿದರು.

ತಹಶೀಲ್ದಾರ್ ವಿಜಯ್‌ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.