
ಅನುಗೊಂಡನಹಳ್ಳಿ (ಹೊಸಕೋಟೆ): ಗೋವಿಂದಪುರದಲ್ಲಿ ಸೋಮವಾರ ಹಣಕಾಸಿನ ಮನಸ್ತಾಪದಿಂದ ಅಣ್ಣನ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಹೊದ ತಮ್ಮ ತನ್ನ ಮೈ, ಕೈ ಸುಟ್ಟುಕೊಂಡಿದ್ದಾನೆ.
ಅಣ್ಣ ರಾಮಕೃಷ್ಣ ಮನೆ ಮೇಲೆ ತಮ್ಮ ಮುನಿರಾಜು ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ವೇಳೆ ಕೈಯಲ್ಲಿದ್ದ ಪೆಟ್ರೋಲ್ ಡಬ್ಬಕ್ಕೆ ಏಕಾಏಕಿ ಬೆಂಕಿ ಹೊತ್ತಿಕೊಂಡಿತು.
ಮುನಿರಜು ಚೀರಾಟ ಕೇಳಿದ ಕೂಡಲೇ ಅಕ್ಕಪಕ್ಕದ ಮನೆಯವರು ಸಹಾಯಕ್ಕೆ ಧಾವಿಸಿದ್ದಾರೆ. ಮುಖ,ಕೈ, ಕಾಲಿಗೆ ತೀವ್ರ ಸುಟ್ಟು ಗಾಯಗಳಾಗಿದ್ದು, ಹೊಸಕೋಟೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಯ ದೃಶ್ಯ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮನೆಗೆ ಕಿಟಿಕಿಗೆ ಸ್ವಲ್ಪ ಹಾನಿಯಾಗಿದೆ.
8 ವರ್ಷಗಳಿಂದ ಗ್ರಾಮದಲ್ಲಿ ಪಟಾಕಿ ಚೀಟಿ ನಡೆಸುತ್ತಿದ್ದ ಮುನಿರಾಜು ಅರ್ಥಿಕ ನಷ್ಟ ಅನುಭವಿಸಿದ್ದರು. ಚೀಟಿ ಹಾಕಿದವರು ಹಣ ವಾಪಸ್ ನೀಡುವಂತೆ ಗಲಾಟೆ ಮಾಡಿದ್ದರು. ಇದರಿಂದಾಗಿ ಜಮೀನು ಮಾರಿ ಕುಟುಂಬದವರು ಹಣ ನೀಡಿದ್ದರು. ಆದರೆ, ಆ ಹಣ ಸಾಕಾಗದ ಕಾರಣ ಉಳಿದ ಜಮೀನನ್ನೂ ಮಾರಾಟ ಮಾಡಿ ಹೆಚ್ಚಿನ ನೀಡುವಂತೆ ಮುನಿರಾಜು ಕೇಳಿದ್ದರು.
ಇರೋ ಅಲ್ಪಸ್ವಲ್ಪ ಜಮೀನು ಮಾರಾಟ ಮಾಡಲ್ಲ ಎಂದು ಅಣ್ಣ ರಾಮಕೃಷ್ಣ ಸ್ಪಷ್ಟವಾಗಿ ಹೇಳಿದ್ದರು. ಇದರಿಂದಾಗಿ ಅಣ್ಣ, ತಮ್ಮಂದಿರ ನಡುವೆ ಮನಸ್ತಾಪ ಉಂಟಾಗಿತ್ತು.
ರಾಮಕೃಷ್ಣ ಕುಟುಂಬ ಮನೆಯಲ್ಲಿ ಮಲಗಿದ್ದಾಗ ಮುನಿರಾಜು ಮನೆಯ ಬಾಗಿಲಿನ ಚಿಲಕ ಹಾಕಿ ನಂತರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದರು. ಈ ವೇಳೆ ಅವಘಡ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.