ADVERTISEMENT

ಸಂಭ್ರಮದ ಕಡಲೇಕಾಯಿ ಪರಿಷೆ

ಪರಿಷೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 13:49 IST
Last Updated 11 ಡಿಸೆಂಬರ್ 2023, 13:49 IST
ದೇವನಹಳ್ಳಿ ಪಾರಿವಾಳ ಗುಡ್ಡದಲ್ಲಿ ಕಡಲೇಕಾಯಿ ಪರಿಷೆ ನಡೆಯಿತು
ದೇವನಹಳ್ಳಿ ಪಾರಿವಾಳ ಗುಡ್ಡದಲ್ಲಿ ಕಡಲೇಕಾಯಿ ಪರಿಷೆ ನಡೆಯಿತು    

ದೇವನಹಳ್ಳಿ: ನೆಹರೂ ಪಾರಿವಾಳ ಗುಡ್ಡದಲ್ಲಿ ಕಡೇ ಕಾರ್ತಿಕ ಸೋಮವಾರ ಪ್ರಯುಕ್ತ ಪ್ರತಿ ವರ್ಷದಂತೆ ಆಂಜನೇಯಸ್ವಾಮಿ ದೇವಾಲಯದಲ್ಲಿ 68ನೇ ವರ್ಷದ ಕಡಲೇಕಾಯಿ ಪರಿಷೆ ಸಂಭ್ರಮದಿಂದ ನಡೆಯಿತು.

ಆಂಜನೇಯಸ್ವಾಮಿಗೆ ವಿಭೂತಿ ಅಲಂಕಾರ ಮಾಡಲಾಗಿತ್ತು. ಒಂದು ಕೆ.ಜಿ ಕಡಲೇಕಾಯಿಗೆ ₹120 ಇತ್ತು.  ಉರಿದ ಕಡಲೇ ಕಾಯಿಗೆ ಒಂದು ಸೇರಿಗೆ ₹25 ಮಾರಾಟ ನಡೆಯಿತು. ಉರಿದ ಕಡಲೇಕಾಯಿ ಕೆ.ಜಿಗೆ ₹150ರಂತೆ ಮಾರಾಟವಾಯಿತು. ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.

ಜೈಮಾರುತಿ ಭಕ್ತ ಮಂಡಳಿ ಸೇವಾ ಸಮಿತಿ ಅಧ್ಯಕ್ಷ ಮೋಟಪ್ಪ, ಉಪಾಧ್ಯಕ್ಷ ವಿ.ದೇವರಾಜ‌, ಪ್ರಧಾನ ಕಾರ್ಯದರ್ಶಿ, ಡಿ.ಎಂ ಮುನಿರಾಜಪ್ಪ, ಖಜಾಂಚಿ ಎನ್‌.ಮುನಿರಾಜು, ಸಂಚಾಲಕ ನಾರಾಯಣಸ್ವಾಮಿ, ಜಿ. ಗಣೇಶ‌, ಎಚ್‌.ನಾರಾಯಣಸ್ವಾಮಿ, ಅರ್ಚಕ ಗೋಪಾಲಕೃಷ್ಣ ಭಟ್ಟರ್‌ ಇದ್ದರು.

ADVERTISEMENT
ದೇವನಹಳ್ಳಿ ಇತಿಹಾಸ ಪ್ರಸಿದ್ದ ಪಟ್ಟಣದ ನೆಹರು ಪಾರಿವಾಳ ಗುಟ್ಟದ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ 68ನೇ ವರ್ಷದ ಕಡಲೇಕಾಯಿ ಪರಿಷೆ ಅಂಗವಾಗಿ ಕಡಲೇಕಾಯಿ ವ್ಯಾಪಾರಿಗಳು ರಾಶಿ ರಾಶಿ ಕಡಲೇಕಾಯಿ ಹಾಕಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.