ADVERTISEMENT

ಸೂಲಿಬೆಲೆ | 'ಕನಕದಾಸರು ಒಂದು ಜಾತಿಗೆ ಸೀಮಿತವಲ್ಲ'

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 2:11 IST
Last Updated 17 ನವೆಂಬರ್ 2025, 2:11 IST
ಹೊಸಕೋಟೆ ತಾಲ್ಲೂಕಿನ ಎಂ ಸತ್ಯವಾರ ಗ್ರಾಮದಲ್ಲಿ ಕನಕದಾಸ ಯುವಕರ ಮಂಡಳಿಯಿಂದ ಕನಕದಾಸ ಜಯಂತಿ ನಡೆಯಿತು
ಹೊಸಕೋಟೆ ತಾಲ್ಲೂಕಿನ ಎಂ ಸತ್ಯವಾರ ಗ್ರಾಮದಲ್ಲಿ ಕನಕದಾಸ ಯುವಕರ ಮಂಡಳಿಯಿಂದ ಕನಕದಾಸ ಜಯಂತಿ ನಡೆಯಿತು   

ಸೂಲಿಬೆಲೆ(ಹೊಸಕೋಟೆ): ಹೋಬಳಿಯ ಕಂಬಳಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಂ.ಸತ್ಯವಾರ ಗ್ರಾಮದಲ್ಲಿ ಕನಕದಾಸ ಯುವಕರ ಮಂಡಳಿಯಿಂದ ದಾಸ ಶ್ರೇಷ್ಠ ಕನಕದಾಸ ಜಯಂತಿ ನಡೆಯಿತು.

ಹೊಸಕೋಟೆ ತಾಲ್ಲೂಕು ಕುರುಬರ ಸಂಘದ ನಿರ್ದೇಶಕ ಎಸ್‌.ಪಿ. ರಾಮು, ಕನಕದಾಸ ಜಾತಿವ್ಯವಸ್ಥೆಯ ಬಲೆಯಲ್ಲಿ ಸಿಲುಕಿ ಅವಮಾನಗೊಂಡಿದ್ದರಿಂದ ಸಮಾಜದಲ್ಲಿ ಜಾತಿ ವ್ಯವಸ್ಥೆ ವಿರುದ್ದ ಧ್ವನಿ ಎತ್ತುವಂತೆ ಅವರನ್ನು ಮಾಡಿತ್ತು. ಆದರೆ ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಿರುವುದು ದುರಂತ ಎಂದು ಬೇಸರಿಸಿದರು.

ಜನ ಜಾಗೃತಗೊಳಿಸಿದ ಮಹಾನೀಯರು, ಹೋರಾಟಗಾರರನ್ನು ಯಾವುದೋ ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಜಯಂತಿ ಆಚರಣೆಗೆ ಸೀಮಿತವಾಗದೆ ಅವರ ಮೌಲ್ಯಗಳನ್ನು ಆಚರಣೆಗೆ ತರಬೇಕು ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.