ADVERTISEMENT

ಕನಕಪುರ | ರೂರಲ್‌ ಕಾಲೇಜಿಗೆ ನ್ಯಾಕ್‌ ಕಮಿಟಿ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 25 ಮೇ 2023, 7:35 IST
Last Updated 25 ಮೇ 2023, 7:35 IST
ಕನಕಪುರ ರೂರಲ್‌ ಕಾಲೇಜಿಗೆ ನ್ಯಾಕ್‌ ಕಮಿಟಿ ತಂಡದೊಂದಿಗೆ ಆರ್‌ಇಎಸ್‌ ಆಡಳಿತ ಮಂಡಳಿಯವರು ಉಪಸ್ಥಿತರಿದ್ದಾರೆ
ಕನಕಪುರ ರೂರಲ್‌ ಕಾಲೇಜಿಗೆ ನ್ಯಾಕ್‌ ಕಮಿಟಿ ತಂಡದೊಂದಿಗೆ ಆರ್‌ಇಎಸ್‌ ಆಡಳಿತ ಮಂಡಳಿಯವರು ಉಪಸ್ಥಿತರಿದ್ದಾರೆ   

ಕನಕಪುರ: ಇಲ್ಲಿನ ರೂರಲ್‌ ಕಾಲೇಜಿನ ಮೌಲ್ಯಮಾಪನ ಮತ್ತು ಶ್ರೇಯಾಂಕ ಉದ್ದೇಶಕ್ಕಾಗಿ ಕೇರಳ ವಿಶ್ಯವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ಪಿ.ಕೆ.ರಾಧಕೃಷ್ಣನ್‌, ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಕೆ.ಪಿ.ಸಿಂಗ್‌, ಮುಂಬೈ ನಿವೃತ್ತ ಪ್ರಾಂಶುಪಾಲ ಡಾ.ಅಲ್ಲಿ ಭೂಷಣ್‌ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ರೂರಲ್‌ ಕಾಲೇಜಿಗೆ 4ನೇ ಆವೃತ್ತಿಯ ನ್ಯಾಕ್‌ ಮಾನ್ಯತೆ ನೀಡಲು ತಂಡವು ಮೇ. 23 ಮತ್ತು 24ರಂದು ಭೇಟಿ ನೀಡಿ, ಕಾಲೇಜಿನ ವಿದ್ಯಾಭ್ಯಾಸದ ಶ್ರೇಣಿ, ದಾಖಲಾತಿಗಳು, ವಿದ್ಯಾರ್ಥಿ ವೇತನ, ಗ್ರಂಥಾಲಯ, ಫಲಿತಾಂಶ, ಪ್ರಯೋಗಾಲಯ, ಕ್ರೀಡಾ ಸಾಧನೆ, ಮೊದಲಾದ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದೆ.

ರೂರಲ್‌ ಎಜುಕೇಷನ್‌ ಸೊಸೈಟಿ (ಆರ್‌ಇಎಸ್‌) ಅಧ್ಯಕ್ಷ ಎಚ್‌.ಕೆ.ಶ್ರೀಕಂಠು, ಉಪಾಧ್ಯಕ್ಷೆ ರಂಗನಾಯಕಮ್ಮ, ಕಾರ್ಯದರ್ಶಿ ಪುಟ್ಟಸ್ವಾಮಿ, ಖಜಾಂಚಿ ಮಂಜುನಾಥ್‌ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಟಿ.ಬಾಲಕೃಷ್ಣ ಉಪಸ್ಥಿತರಿದ್ದು ಸಮಿತಿಗೆ ಸಹಕಾರ ನೀಡಿದ್ದಾರೆ.

ADVERTISEMENT
ಕನಕಪುರ ನ್ಯಾಕ್‌ ಕಮಿಟಿ ಸಮಸ್ಯರೊಂದಿಗೆ ಆರ್‌ಇಎಸ್‌ ಆಡಳಿತ ಮಂಡಳಿ ಸದಸ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.