
ದೊಡ್ಡಬಳ್ಳಾಪುರ: ಕಾರ್ತೀಕ ಮಾಸದ ಕೊನೆಯ ಸೋಮವಾರ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿವಿಧ ದೇಗುಲಗಳಲ್ಲಿ ಪೂಜಾ ಕೈಂಕರ್ಯ ಹಾಗೂ ದೀಪೋತ್ಸವ ಜರುಗಿತು.
ದೊಡ್ಡಬೆಳವಂಗಲ ಸಮೀಪದ ತೋಪನಯ್ಯಸ್ವಾಮಿ, ಹುಲುಕುಡಿ ಬೆಟ್ಟದ ವೀರಭದರ, ಶಿರವಾರದಲ್ಲಿನ ಬಸವಣ್ಣ ದೇವಾಲಯ, ಎಸ್.ಎಂ.ಗೊಲ್ಲಹಳ್ಳಿ ಸಮೀಪದ ದಿನ್ನೆ ಬಸವಣ್ಣ, ನಗರದ ಮುಖ್ಯರಸ್ತೆಯಲ್ಲಿನ ನಗರೇಶ್ವರ, ಕೊಂಡಸಂದ್ರ ಗ್ರಾಮದ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಕಡೆ ಕಾರ್ತಿಕ ಪೂಜೆ, ಸಂಜೆಯಾಗುತ್ತಲೇ ದೇವಾಲಯಗಳಲ್ಲಿ ದೀಪೋತ್ಸವ ನಡೆಯಿತು.
ನಗರದ ಕೊಂಗಾಡಿಯಪ್ಪ ಕಾಲೇಜು ರಸ್ತೆಯಲ್ಲಿನ ಬಯಲು ಬಸವಣ್ಣ ದೇವಾಲಯದ ಬಳಿ ಕಡಲೇಕಾಯಿ ಪರಿಷೆ ನಡೆಯಿತು. ಮಂಜುನಾಥಸ್ವಾಮಿಗೆ, ಬಸವಣ್ಣ ಹಾಗೂ ಗಣಪತಿ ದೇವತಾ ಮೂರ್ತಿಗಳಿಗೆ ವಿಶೇಷ ಕಡಲೇ ಕಾಯಿ ಅಲಂಕಾರ ಮಾಡಲಾಗಿತ್ತು. ದೇವಾಲಯಕ್ಕೆ ಆಗಮಿಸಿದ್ದ ನೂರಾರು ಜನ ಭಕ್ತಾದಿಗಳಿಗೆ ಕಡಲೇಕಾಯಿ ಪ್ರಸಾದ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.