ADVERTISEMENT

ಸೊಂಟದ ಬೆಲ್ಟ್‌ನಲ್ಲಿ ಪೇಸ್ಟ್‌ ಚಿನ್ನ ಕಳ್ಳಸಾಗಣೆ; ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2023, 21:03 IST
Last Updated 9 ಸೆಪ್ಟೆಂಬರ್ 2023, 21:03 IST
ವಶಕ್ಕೆ ಪಡೆದ ಚಿನ್ನ
ವಶಕ್ಕೆ ಪಡೆದ ಚಿನ್ನ   

ದೇವನಹಳ್ಳಿ: ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ಶನಿವಾರ ರಾತ್ರಿ ಬೆಂಗಳೂರಿಗೆ ಬಂದಿಳಿದ ಪ್ರಯಾಣಿಕರಿಬ್ಬರಿಂದ ಅಂದಾಜು ₹1.54 ಕೋಟಿ ಮೌಲ್ಯದ 2.8 ಕೆ.ಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 

ಸೊಂಟದ ಬೆಲ್ಟ್‌ಗೆ ಇನ್ಸೂಲೇಷನ್‌ ಟೇಪ್‌ನಲ್ಲಿ ಮೆಟಲ್ ಪೇಸ್ಟ್ ರೂಪದ ಚಿನ್ನ ಸುತ್ತಿಕೊಂಡು ಕಳ್ಳಸಾಗಣೆಗೆ ಯತ್ನಿಸಿದ ಪ್ರಯಾಣಿಕರು ತಪಾಸಣೆ ವೇಳೆ ಕಸ್ಟಮ್ಸ್‌ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಇಬ್ಬರೂ ಪ್ರಯಾಣಿಕರನ್ನು ಬಂಧಿಸಲಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT