ADVERTISEMENT

ಕೋರಮಂಗಲ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 13:42 IST
Last Updated 12 ಜೂನ್ 2019, 13:42 IST
ಕೋರಮಂಗಲ ಗ್ರಾಮದಲ್ಲಿ ಸತ್ಯಮ್ಮದೇವಿ ಹಾಗೂ ಮುನೇಶ್ವರಸ್ವಾಮಿ ದೇವರ ಜಾತ್ರಾಮಹೋತ್ಸವದಲ್ಲಿ ಮಹಿಳೆಯರು ದೀಪಗಳನ್ನು ಹೊತ್ತು ಮೆರವಣಿಗೆಯಲ್ಲಿ ಉತ್ಸವ ಮೂರ್ತಿಯೊಂದಿಗೆ ಸಾಗಿದರು
ಕೋರಮಂಗಲ ಗ್ರಾಮದಲ್ಲಿ ಸತ್ಯಮ್ಮದೇವಿ ಹಾಗೂ ಮುನೇಶ್ವರಸ್ವಾಮಿ ದೇವರ ಜಾತ್ರಾಮಹೋತ್ಸವದಲ್ಲಿ ಮಹಿಳೆಯರು ದೀಪಗಳನ್ನು ಹೊತ್ತು ಮೆರವಣಿಗೆಯಲ್ಲಿ ಉತ್ಸವ ಮೂರ್ತಿಯೊಂದಿಗೆ ಸಾಗಿದರು   

ವಿಜಯಪುರ: ಇಲ್ಲಿನ ಕೋರಮಂಗಲ ಗ್ರಾಮದಲ್ಲಿ ಸತ್ಯಮ್ಮ ತಾಯಿ ಮತ್ತು ಮುನೇಶ್ವರ ದೇವರ ಜಾತ್ರಾ ಮಹೋತ್ಸವ ಸಡಗರದಿಂದ ನೆರವೇರಿತು.

ತಂಬಿಟ್ಟಿನ ದೀಪಗಳನ್ನು ಮಾಡಿ, ವಿವಿಧ ಬಗೆಯ ಹೂಗಳಿಂದ ಸಿಂಗರಿಸಿ, ತಮಟೆ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ದೇವಾಲಯಕ್ಕೆ ತೆರಳಿ ದೀಪಗಳನ್ನು ಬೆಳಗಲಾಯಿತು.

ಗ್ರಾಮದ ಮುಖಂಡರು, ಯುವಕರು ಸತ್ಯಮ್ಮ ಹಾಗೂ ಮುನೇಶ್ವರಸ್ವಾಮಿ ದೇವರುಗಳ ಉತ್ಸವ ಮೂರ್ತಿಗಳಿಗೆ ಹೂವಿನ ಅಲಂಕಾರ ಮಾಡಿಸಿ, ತಮಟೆ ವಾದನಗಳೊಂದಿಗೆ ಮೆರವಣಿಗೆ ಮಾಡಿದರು.

ADVERTISEMENT

ದೇವಾಲಯಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಗಣ್ಯರು ಗ್ರಾಮಕ್ಕೆ ಭೇಟಿ ನೀಡಿ ಜಾತ್ರಾ ಮಹೋತ್ಸವಕ್ಕೆ ಶುಭ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.