ADVERTISEMENT

ಹೊಸಹಳ್ಳಿ: ಲಕ್ಷ್ಮಿನರಸಿಂಹಸ್ವಾಮಿ ಅದ್ದೂರಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 17 ಮೇ 2025, 13:13 IST
Last Updated 17 ಮೇ 2025, 13:13 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಉಜ್ಜನಿ ಹೊಸಹಳ್ಳಿ ಗ್ರಾಮದಲ್ಲಿ ಶನಿವಾರ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ ಅದ್ದೂರಿಯಾಗಿ ನಡೆಯಿತು
ದೊಡ್ಡಬಳ್ಳಾಪುರ ತಾಲ್ಲೂಕಿನ ಉಜ್ಜನಿ ಹೊಸಹಳ್ಳಿ ಗ್ರಾಮದಲ್ಲಿ ಶನಿವಾರ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ ಅದ್ದೂರಿಯಾಗಿ ನಡೆಯಿತು   

ಹೊಸಹಳ್ಳಿ(ದೊಡ್ಡಬಳ್ಳಾಪುರ): ತಾಲ್ಲೂಕಿನ ಉಜ್ಜನಿ ಹೊಸಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ದ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ ಶನಿವಾರ ಮಧ್ಯಾಹ್ನ ವಿಜೃಂಭಣೆಯಿಂದ ನೆಡೆಯಿತು. ರಥೋತ್ಸವದಲ್ಲಿ ಸಾವಿರಾರು ಭಾಗವಹಸಿದ್ದರು.

ರಥೋತ್ಸವದ ಪ್ರಯುಕ್ತ ದೇವಾಲಯದಲ್ಲಿ ಬೆಳಗ್ಗಿನಿಂದಲೂ ಅಭಿಷೇಕ, ಅರ್ಚನೆ ನಡೆಸಲಾಯಿತು. ಲಕ್ಷ್ಮಿನರಸಿಂಹಸ್ವಾಮಿ ಮೂರ್ತಿಯನ್ನು ದೇವಾಲಯದಿಂದ ತಂದು ರಥದಲ್ಲಿ ಪ್ರತಿಸ್ಠಾಪಿಸುತಿದ್ದಂತೆ ಮಧ್ಯಾಹ್ನ 2.30ಕ್ಕೆ ಮಂತ್ರ ಘೋಷಗಳೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ಜಯಘೋಷ ಕೂಗುತ್ತಾ ಹರಕೆ ಹೊತ್ತ ಭಕ್ತರು ಬಾಳೆಹಣ್ಣು, ದವನ ಅರ್ಪಿಸಿ ಭಕ್ತಿಭಾವ ಮೆರದರು.

ರಥೋತ್ಸವದ ಅಂಗವಾಗಿ ರಥ ಹಾಗೂ ಗರ್ಭಗುಡಿಯಲ್ಲಿನ ದೇವರಿಗೆ ವಿಶೇಷವಾಗಿ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧ ಸಮುದಾಯಗಳು ರಥೊತ್ಸವಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲು ರಸ್ತೆ ಬದಿಗಳಲ್ಲಿ ಶಾಮಿಯಾನ, ಟೆಂಟ್ ಮತ್ತು ಅರವಂಟಿಕೆ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ಅಂಬಾಭವಾನಿ ಮರಾಠ ಸಂಘದಿಂದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಹುತಾತ್ಮರಾದಂತಹ ಭಾರತೀಯ ಯೋಧರ ಜ್ಞಾಪಕಾರ್ಥವಾಗಿ ಅನ್ನಸಂತರ್ಪಣೆ ನಡೆಯಿತು.

ರಥೋತ್ಸವದ ಅಂಗವಾಗಿ ಮೇ 19ರವರೆಗೆ ಅಭಿಷೇಕ, ಅರ್ಚನೆ, ಮಹಾಗಣಪತಿ ಪೂಜೆ, ಧ್ವಜಾರೋಹಣ, ಕಲ್ಯಾಣೋತ್ಸವ, ಧೂಳೋತ್ಸವ, ಪಲ್ಲಕಿ ಉತ್ಸವ, ಡೊಳ್ಳು ಕುಣಿತ, ಉಯ್ಯಾಲೋತ್ಸವ, ಶಯನೋತ್ಸವ, ಗ್ರಾಮೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಶನಿವಾರ ಸಂಜೆ ‘ಗುಂಡಮ್ಮ ಕಥಾ’ ಅಥವಾ ‘ಸಾಸಲು ಚಿನ್ನಮ್ಮ’ ಕಥಾ ನಾಟಕ ಪ್ರದರ್ಶನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.