ADVERTISEMENT

ಲಯನ್ಸ್ ಕ್ಲಬ್‌ನಿಂದ ಚಿರತೆ ದತ್ತು ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 4:58 IST
Last Updated 28 ಅಕ್ಟೋಬರ್ 2020, 4:58 IST
ಬನ್ನೇರುಘಟ್ಟ ಜೈವಿಕ ಉದ್ಯಾನದ ಒಂದು ಚಿರತೆ ಮತ್ತು ಹಾರ್ನ್‌ಬಿಲ್‌ ಪಕ್ಷಿಯನ್ನು ಜಿಗಣಿ ಲಯನ್ಸ್ ಕ್ಲಬ್ ವತಿಯಿಂದ ದತ್ತು ಪಡೆಯಲಾಯಿತು
ಬನ್ನೇರುಘಟ್ಟ ಜೈವಿಕ ಉದ್ಯಾನದ ಒಂದು ಚಿರತೆ ಮತ್ತು ಹಾರ್ನ್‌ಬಿಲ್‌ ಪಕ್ಷಿಯನ್ನು ಜಿಗಣಿ ಲಯನ್ಸ್ ಕ್ಲಬ್ ವತಿಯಿಂದ ದತ್ತು ಪಡೆಯಲಾಯಿತು   

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದ ಒಂದು ಚಿರತೆ ಮತ್ತು ಹಾರ್ನ್‌ಬಿಲ್‌ ಪಕ್ಷಿಯನ್ನು ಜಿಗಣಿ ಲಯನ್ಸ್‌ ಕ್ಲಬ್‌ ವತಿಯಿಂದ ದತ್ತು ಸ್ವೀಕರಿಸಲಾಯಿತು.

ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್‌ ಸಿಂಗ್‌ ಮಾತನಾಡಿ, ಉದ್ಯಾನದ ಆದಾಯ ಕೊರೊನಾ ಹಿನ್ನೆಲೆಯಲ್ಲಿ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ವಿವಿಧ ಸಂಘ –ಸಂಸ್ಥೆಗಳು ಉದ್ಯಾನದ ಪ್ರಾಣಿಗಳನ್ನು ದತ್ತು ಪಡೆಯಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಕಾರ್ಖಾನೆಗಳು, ಸಂಘ –ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ದತ್ತು ಪಡೆಯಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.

ಲಯನ್ಸ್‌ ಕ್ಲಬ್‌ ವತಿಯಿಂದ ಪ್ರಾಣಿಗಳಿಗೆ ಅವಶ್ಯ ಇರುವ ಔಷಧ ಉಚಿತವಾಗಿ ಉದ್ಯಾನಕ್ಕೆ ನೀಡಲಾಯಿತು. ಲಯನ್ಸ್‌ ಕ್ಲಬ್‌ನ ಅಂಟೋಣಿ, ಎಂ.ಸಿ.ರಾಜಪ್ಪ, ಪ್ರಕಾಶ್‌, ವೇಣುಗೋಪಾಲ್‌, ಮುರಳೀಧರ್, ಮಾರಪ್ಪ, ಜಗನ್ನಾಥ್, ನಾಗರಾಜು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.