ADVERTISEMENT

‘ವೇಷ ತೊಡಿಸುವುದಕ್ಕೆ ಆಚರಣೆ ಸೀಮಿತವಾಗದಿರಲಿ’

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2019, 13:33 IST
Last Updated 24 ಆಗಸ್ಟ್ 2019, 13:33 IST
ಕೃಷ್ಣ, ರಾಧೆ ವೇಷ ಧರಿಸಿದ್ದ ಮಕ್ಕಳು ಕಂಡಿದ್ದು ಹೀಗೆ
ಕೃಷ್ಣ, ರಾಧೆ ವೇಷ ಧರಿಸಿದ್ದ ಮಕ್ಕಳು ಕಂಡಿದ್ದು ಹೀಗೆ   

ದೇವನಹಳ್ಳಿ: ‘ಇಂದಿನ ಮಕ್ಕಳು ಭವಿಷ್ಯದ ಪ್ರಜೆಗಳು. ಮುಂದಿನ ಸಮಾಜ ಪ್ರಗತಿಯಾಗಬೇಕಾದರೆ ಮಕ್ಕಳಿಗೆ ನೈತಿಕ ಮೌಲ್ಯ ಶಿಕ್ಷಣದ ಬಗ್ಗೆ ತಿಳಿಸಿಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕ ಉಪಾಧ್ಯಕ್ಷ ಬಿ.ಎನ್.ಕೃಷ್ಣಪ್ಪ ಹೇಳಿದರು.

ಇಲ್ಲಿನ ನ್ಯೂ ಶಾರದಾ ಪಬ್ಲಿಕ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿಮಕ್ಕಳಿಗೆ ಏರ್ಪಡಿಸಿದ್ದ ರಾಧೆ ಶ್ರೀಕೃಷ್ಣನ ವೇಷಭೂಷಣ ಸ್ವರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪೋಷಕರು ಮಕ್ಕಳಿಗೆ ಶ್ರೀಕೃಷ್ಣ ರಾಧೆಯರ ವೇಷ ತೊಡಿಸುವುದಕ್ಕೆ ಮಾತ್ರ ಸೀಮಿತವಾಗಬಾರದು. ಪುರಾಣ ಪುರುಷರು, ಐತಿಹಾಸಿಕ ರಾಜರು, ರಾಷ್ಟ್ರ ನಾಯಕರು ಬೆಳೆದು ಬಂದ ರೀತಿ, ನಡವಳಿಕೆ, ಅವರ ವ್ಯಕ್ತಿತ್ವ ಮತ್ತು ಸಾಧನೆಗಳ ಬಗ್ಗೆ ಮನವರಿಕೆ ಮಾಡಬೇಕು. ಛತ್ರಪತಿ ಶಿವಾಜಿ ಮಗುವಾಗಿದ್ದಾಗ ತಾಯಿ ಜೀಜಾಬಾಯಿ ಹೇಳಿದ ರಾಮಾಯಣ, ಮಹಾಭಾರತದ ಕಥೆ ಕೇಳಿ, ಅದನ್ನೇ ಆದರ್ಶವನ್ನಾಗಿಟ್ಟುಕೊಂಡಿದ್ದ’ ಎಂದು ಹೇಳಿದರು.

ADVERTISEMENT

‘ಶಾಲೆಯಲ್ಲಿ ಎಲ್ಲ ಧರ್ಮ, ಜಾತಿ, ಸಮುದಾಯದ ಮಕ್ಕಳು ಕಲಿಯಲು ಬರುತ್ತಾರೆ. ಪ್ರತಿಯೊಂದು ಧರ್ಮದ ಸಾರವನ್ನು ಎಲ್ಲ ಮಕ್ಕಳಿಗೆ ತಿಳಿಸಬೇಕು. ಎಲ್ಲ ಧರ್ಮದ ಸಾರ ಒಂದೇ ಎಂಬುದನ್ನು ಮಕ್ಕಳಲ್ಲಿ ಬಿತ್ತಬೇಕು. ಪರಸ್ಪರ ವಿಶ್ವಾಸ, ಸಾಮರಸ್ಯ, ಸಹೋದರತೆ ಬೆಸೆಯಲು ಇದು ಸಹಕಾರಿ’ ಎಂದು ಹೇಳಿದರು.

ಶಾಲಾ ಆಡಳಿತ ಮಂಡಳಿ ಸಂಸ್ಥಾಪಕ ಕಾರ್ಯದರ್ಶಿ ವಿನಯ್ ಕುಮಾರ್, ಮುಖ್ಯಶಿಕ್ಷಕಿ ಪುಪ್ಪಾಂಜಲಿ, ಶಿಕ್ಷಕ ಗುರುಪ್ರಸಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.