ADVERTISEMENT

‘ಪತ್ರ ಬರಹಗಾರರ ಜವಾಬ್ದಾರಿ ಮಹತ್ವದ್ದು’

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 13:04 IST
Last Updated 16 ಜನವರಿ 2019, 13:04 IST
ತಾಲ್ಲೂಕು ಪರವಾನಗಿ ದಸ್ತಾವೇಜು ಪತ್ರ ಬರಹಗಾರರ ಸಂಘದ ಪದಾಧಿಕಾರಿಗಳು
ತಾಲ್ಲೂಕು ಪರವಾನಗಿ ದಸ್ತಾವೇಜು ಪತ್ರ ಬರಹಗಾರರ ಸಂಘದ ಪದಾಧಿಕಾರಿಗಳು   

ದೊಡ್ಡಬಳ್ಳಾಪುರ: ತಾಲ್ಲೂಕು ಪರವಾನಗಿ ದಸ್ತಾವೇಜು ಪತ್ರ ಬರಹಗಾರರ ಸಂಘವನ್ನು ಜಿಲ್ಲಾ ನೋಂದಣಾಧಿಕಾರಿ ಹಾಗೂ ಮುದ್ರಾಂಕಗಳ ಉಪ ಆಯುಕ್ತರಾದ ಸವಿತಾ ಲಕ್ಷ್ಮೀ ಕೆ.ಬಿ.ಬೆಳಗಲಿ ಉದ್ಘಾಟಿಸಿದರು.

ಅವರು ಮಾತನಾಡಿ, ಪತ್ರ ಬರಹಗಾರರ ಜವಾಬ್ದಾರಿ ಅತ್ಯಂತ ಮಹತ್ವದ್ದು. ಭೂಮಿ ಬೆಲೆ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ದಾಖಲೆಗಳ ಪರಿಶೀಲನೆ ಹಾಗೂ ಪತ್ರದಲ್ಲಿನ ಒಂದೊಂದು ಸಾಲು ಕೂಡ ಮುಖ್ಯವಾಗಿದೆ. ಎಲ್ಲ ವ್ಯವಹಾರಗಳು ಆನ್ ಲೈನ್ ಆಗುತ್ತಿರುವ ಸಂದರ್ಭದಲ್ಲಿ ಪತ್ರ ಬರಹಗಾರರು ಎಚ್ಚರದಿಂದ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ದೊಡ್ಡಬಳ್ಳಾಪುರ ಹಿರಿಯ ಉಪನೋಂದಣಾಧಿಕಾರಿ ಕೆ.ಬಿ.ಜಯಕುಮಾರ್, ಎಸ್.ಪಿ.ರಂಗರಾಜು, ನಿವೃತ್ತ ನೋಂದಣಾಧಿಕಾರಿ ಎಚ್.ಎಸ್.ಸೋಮಶೇಖರ್, ಸಂಘದ ಅಧ್ಯಕ್ಷ ಕೆ.ಬಿ.ಹನುಮಂತಯ್ಯ, ಉಪಾಧ್ಯಕ್ಷ ಎಸ್.ಜಯಣ್ಣ, ಕಾರ್ಯದರ್ಶಿ ಎನ್.ತಿರುಮಲೇಶ್, ಸಹ ಕಾರ್ಯದರ್ಶಿ ಆರ್.ಸೌಮ್ಯ, ಖಜಾಂಚಿ ಕೆ.ವಿ.ಶ್ರೀನಿವಾಸ, ಸಹಲಹೆಗಾರ ಕೆ.ಬಿ.ನಾಗರಾಜ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.