ADVERTISEMENT

ದೇವನಹಳ್ಳಿ | ಶಾಸಕರಿಂದ ಜೀವ ಬೆದರಿಕೆ ಕರೆ: ಬಿ.ಕೆ.ಶಿವಪ್ಪ

ಮುಷ್ಕರ ದಿನದಂದು ನೋಂದಣಿ ಮಾಡಿಸಿದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 4:25 IST
Last Updated 19 ಮಾರ್ಚ್ 2023, 4:25 IST
ದೇವನಹಳ್ಳಿಯ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಎಎಪಿ ಮುಖಂಡ ಬಿ.ಕೆ.ಶಿವಪ್ಪ ಮಾತನಾಡಿದರು
ದೇವನಹಳ್ಳಿಯ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಎಎಪಿ ಮುಖಂಡ ಬಿ.ಕೆ.ಶಿವಪ್ಪ ಮಾತನಾಡಿದರು   

ದೇವನಹಳ್ಳಿ: ಮಾರ್ಚ್‌ 1 ರಂದು ಪಟ್ಟಣದ ಸಬ್‌ ರಿಜಿಸ್ಟ್ರಾರ್ ಕಚೇರಿಯಲ್ಲಿ ಗುಪ್ತವಾಗಿ ನೋಂದಣಿ ಮಾಡಿಸುತ್ತಿದ್ದ ಪ್ರಕರಣದಲ್ಲಿ ತಪ್ಪಿತಸ್ಥ, ಅಧಿಕಾರಿಗಳು, ಸಿಬ್ಬಂದಿ ಹಾಗೂ ರಾಜಕೀಯ ವ್ಯಕ್ತಿಗಳ ವಿರುದ್ಧ ಜಿಲ್ಲಾಧಿಕಾರಿಗಳು, ತಹಶೀಲ್ದಾರ್‌, ಪೊಲೀಸರಿಗೆ ನೀಡಿರುವ ದೂರಿನ ತನಿಖೆ ಶೀಘ್ರವಾಗಿ ನಡೆಯಬೇಕೆಂದು ಎಂದು ಎಎಪಿ ಮುಖಂಡ ಬಿ.ಕೆ.ಶಿವಪ್ಪ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾಧ್ಯಮಗಳಲ್ಲಿ ಸಬ್‌ರಿಜಿಸ್ಟ್ರಾರ್‌ ಪ್ರಕರಣದ ಪ್ರಸಾರವಾದ ನಂತರ ಶಾಸಕ ನಿಸರ್ಗ ನಾರಾಯಣ ಅವರು ನನಗೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ. ನಿರಂತರವಾಗಿ ಕರೆಗಳು ಬರುತ್ತಿದೆ. ಒಂದು ವೇಳೆ ನನ್ನ ಪ್ರಾಣಕ್ಕೆ ಕುತ್ತು ಉಂಟಾದರೇ ಅದಕ್ಕೆ ಶಾಸಕರೇ ನೇರವಾದ ಹೊಣೆ’ ಎಂದು ಆರೋಪಿಸಿದರು.

‘ಪಾರದರ್ಶಕವಾಗಿ ತನಿಖೆ ನಡೆಲು ಅಧಿಕಾರಿಗಳು ಯತ್ನಿಸಬೇಕು. ಯಾವುದೇ ರೀತಿಯ ರಾಜಕೀಯ ಪ್ರಭಾವಕ್ಕೆ ಮಣಿದು ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ತಪ್ಪಿಸಬಾರದು. ಈಗಾಗಲೇ ಸಬ್‌ ರಿಜಸ್ಟ್ರಾರ್‌ ಕಚೇರಿಯ ಸಿಸಿಟಿವಿ ದೃಶ್ಯಾವಳಿ ಕುರಿತು ಆರ್‌ಟಿಐನಲ್ಲಿ ಮಾಹಿತಿ ಕೇಳಿದ್ದು, ಲಭ್ಯವಿಲ್ಲ ಎಂದು ಉತ್ತರ ನೀಡಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಸರ್ಕಾರಿ ಕಚೇರಿಯಲ್ಲಿರುವ ದಾಖಲೆಗಳಿಗೆ ಯಾರು ರಕ್ಷಣೆ ನೀಡುತ್ತಾರೆ. ಅಧಿಕಾರಿಗಳು ಯಾರಿಗೆ ರಕ್ಷಣೆ ನೀಡುತ್ತಿದ್ದಾರೆ. ಪಕ್ಷಾತೀತವಾಗಿ ಈ ಪ್ರಕರಣದ ಕುರಿತು ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

ಸುಹಾಸಿನಿ, ರತ್ನಮ್ಮ, ದೇವರಾಜ್‌, ಕುಮಾರ್‌, ಪಲ್ಲವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.