ADVERTISEMENT

ನಂದಗುಡಿ ಬಳಿ ಲಾರಿ–ಬೈಕ್ ಡಿಕ್ಕಿ: ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 2:15 IST
Last Updated 26 ಫೆಬ್ರುವರಿ 2026, 2:15 IST
<div class="paragraphs"><p>(ಸಾಂದರ್ಭಿಕ ಚಿತ್ರ)</p></div>

(ಸಾಂದರ್ಭಿಕ ಚಿತ್ರ)

   

ಗೆಟ್ಟಿ ಚಿತ್ರ

ನಂದಗುಡಿ (ಹೊಸಕೋಟೆ): ಹೋಬಳಿಯ ಡಿ.ಶೆಟ್ಟಿಹಳ್ಳಿ ಗ್ರಾಮದ ಸುಮಧುರ ಕಂಪನಿ ಬಳಿ ಹೊಸಕೋಟೆ ಮತ್ತು ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಶ್ರೀಹರಿ (26) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ADVERTISEMENT

ಆಂಧ್ರಪ್ರದೇಶಕ್ಕೆ ಸೇರಿದ ಬಿ.ಕೊತ್ತಕೋಟ ಊರಿನ ಶ್ರೀಹರಿ ನಂದಗುಡಿ ಭಾಗದಿಂದ ಹೊಸಕೋಟೆ ಕಡೆ ಬರುತ್ತಿರುವಾಗ ಮುಂಭಾಗದಿಂದ (ಹೊಸಕೋಟೆಯಿಂದ ನಂದಗುಡಿ ಕಡೆ) ಬರುತ್ತಿದ್ದ ಲಾರಿಯ ಒಂದು ಬದಿ ತಗುಲಿ ಬೈಕ್ ಸವಾರ ಕೆಳಕ್ಕೆ ಬಿದ್ದಿದ್ದಾರೆ. ಈ ಸಂದರ್ಭ ಲಾರಿಯ ಚಕ್ರದ ಕೆಳಗೆ ಬೈಕ್ ಸವಾರನ ತಲೆ ಸಿಕ್ಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಹೊಸಕೋಟೆ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.