
ಪ್ರಜಾವಾಣಿ ವಾರ್ತೆ
ಹೊಸಕೋಟೆ: ಇತಿಹಾಸ ಪ್ರಸಿದ್ದ ಹೊಸಕೋಟೆ ಕರಗ ಮಹೋತ್ಸವದಲ್ಲಿ ನಾಲ್ಕು ಬಾರಿ ಕರಗ ಹೊತ್ತಿದ್ದ ಕೋಟೆ ಬಡಾವಣೆಯ ಗವಿ ರಸ್ತೆ ನಿವಾಸಿ ಸಿ.ಮಹೇಶ್ (66) ಸೋಮವಾರ ಉಸಿರಾಟದ ತೊಂದರೆಯಿಂದ ನಿಧನರಾದರು.
ಮೃತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. ಸೋಮವಾರ ಸಂಜೆ ಹೊಸಕೋಟೆಯಲ್ಲಿ ಅಂತ್ಯಕ್ರಿಯೆ ನಡೆಯಿತು.
ವಿವಿಧ ಧಾರ್ಮಿಕ ಕೇಂದ್ರ, ಕ್ಷೇತ್ರಗಳಿಗೆ ಪಾದಯಾತ್ರೆ ಮೂಲಕ ಪ್ರವಾಸ ಕೈಗೊಳ್ಳುವ ಹವ್ಯಾಸ ಹೊಂದಿದ್ದ ಮಹೇಶ್ ಐದು ಬಾರಿ ಕಾಶಿ ಯಾತ್ರೆ ಕೈಗೊಂಡಿದ್ದರು. ಧರ್ಮಸ್ಥಳ, ತಿರುಪತಿ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಪಾದಯಾತ್ರೆಯಲ್ಲಿ ತೆರಳಿದ್ದರು. ಕೆಲವು ತಿಂಗಳ ಹಿಂದೆ ಪಾದಯಾತ್ರೆ ಸಂದರ್ಭದಲ್ಲಿ ಅಪಘಾತ ಸಂಭವಿಸಿ ಗಾಯಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.