ADVERTISEMENT

‘ಹಾಲು ಬೆಲೆ ಕಡಿತ ನಿರ್ಧಾರ ಅನಿವಾರ್ಯ’

ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಎಚ್. ಅಪ್ಪಯ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2018, 13:54 IST
Last Updated 4 ಆಗಸ್ಟ್ 2018, 13:54 IST
 ‘ಬಮೂಲ್’ ನಿರ್ದೇಶಕ ಎಚ್. ಅಪ್ಪಯ್ಯ ಮಾತನಾಡಿದರು
 ‘ಬಮೂಲ್’ ನಿರ್ದೇಶಕ ಎಚ್. ಅಪ್ಪಯ್ಯ ಮಾತನಾಡಿದರು   

ದೊಡ್ಡಬಳ್ಳಾಪುರ: ತಾಲ್ಲೂಕಿನ ಹುಸ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆ ಸಂಘದ ಆವರಣದಲ್ಲಿ ನಡೆಯಿತು.

ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಎಚ್. ಅಪ್ಪಯ್ಯ ಮಾತನಾಡಿ, ಪ್ರಸ್ತುತ ಹಾಲಿನ ಸರಬರಾಜು ಹೆಚ್ಚಾಗಿದ್ದು, ಬೆಲೆ ಕಡಿತ ಮಾಡುವುದು ಅನಿವಾರ್ಯವಾಗಿದೆ. ಕನಕಪುರದಲ್ಲಿ ಮೆಗಾ ಡೈರಿ ಆರಂಭವಾಗಿದೆ. ಇದು ಪೂರ್ಣ ಪ್ರಮಾಣದಲ್ಲಿ ನಡೆದರೆ ಹಾಲಿಗೆ ಹೆಚ್ಚಿನ ಬೆಲೆ ನೀಡಲು ಸಾಧ್ಯವಾಗುತ್ತದೆ ಎಂದರು.

ರಾಸುಗಳ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡಲು ಅನುಕೂಲ ಮಾಡಿಕೊಡುವ ದಿಸೆಯಲ್ಲಿ ಬೆಂಗಳೂರು ಹಾಲು ಒಕ್ಕೂಟದಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ‘ಕೌ ಮ್ಯಾಟ್‌’ಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದ ಎಂದರು.

ADVERTISEMENT

ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರಿಗೆ ₹ 2 ಲಕ್ಷ ಗಳವರೆಗೆ ಅಪಘಾತ ಜೀವವಿಮೆ ಹಾಗ ₹ 1ಲಕ್ಷಗಳ ಸಹಜ ಮರಣದ ಜೀವವಿಮೆ ಸೌಲಭ್ಯ ನೀಡಲಾಗುತ್ತಿದೆ. ₹ 282 ವಿಮಾ ಕಂತಾಗಿದ್ದು, ಸದಸ್ಯರು ₹ 140 ವಿಮಾ ಕಂತು ಪಾವತಿಸಿದರೆ ವಿಮೆ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ಹಾಲು ಕರೆಯುವ ಯಂತ್ರಗಳನ್ನು ಪಡೆಯಬಹುದಾಗಿದೆ. ಸದಸ್ಯರು ಗುಣಮಟ್ಟದ ಹಾಲನ್ನು ಡೈರಿಗಳಿಗೆ ಸರಬರಾಜು ಮಾಡಬೇಕಿದೆ ಎಂದರು.

ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಶ್ರೀನಿವಾಸ್ ಲೆಕ್ಕಪತ್ರ ವರದಿ ಮಂಡಿಸಿ ಡೈರಿ ₹ 6.43 ಲಕ್ಷ ನಿವ್ಹಳ ಲಾಭ ಗಳಿಸಿದೆ ಎಂದರು.

ಸಂಘದ ಅಧ್ಯಕ್ಷ ತಿಮ್ಮೇಗೌಡ ಅಧ್ಯಕ್ಷತೆ ವಹಿಸಿದ್ದರು. ಬಮೂಲ್ ವಿಸ್ತರಣಾಧಿಕಾರಿ ವಿಜಯಕುಮಾರ್, ಟಿ.ಆನಂದ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.