ADVERTISEMENT

ಶಾಂತಿಯುತ ಮತದಾನ

ದೊಡ್ಡಬಳ್ಳಾಪುರ: ಬಿಜೆಪಿ–ಜೆಡಿಎಸ್‌ ಕಾರ್ಯಕರ್ತರ ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 4:06 IST
Last Updated 29 ಅಕ್ಟೋಬರ್ 2020, 4:06 IST
ಬಿಜೆಪಿ ಮತ್ತು ಜೆಡಿಎಸ್‌ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು
ಬಿಜೆಪಿ ಮತ್ತು ಜೆಡಿಎಸ್‌ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು   

ದೊಡ್ಡಬಳ್ಳಾಪುರ:ವಿಧಾನ ಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಬುಧವಾರ ನಡೆದ ಮತದಾನದ ವೇಳೆ ತಾಲ್ಲೂಕು ಕಚೇರಿಯ ಮತದಾನ ಕೇಂದ್ರದ ಸಮೀಪ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ತಾಲ್ಲೂಕು ಕಚೇರಿ ಮತದಾನ ಕೇಂದ್ರದ ಮತಗಟ್ಟೆ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದಾರೆಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಇದೇ ವಿಚಾರವು ಎರಡು ಪಕ್ಷಗಳ ಮುಖಂಡರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಪೊಲೀಸರು ಎರಡೂ ಗುಂಪಿನ ಮುಖಂಡರನ್ನು ಮತಗಟ್ಟೆ ಕೇಂದ್ರದಿಂದ ದೂರ ಕಳುಹಿಸಿದರು.

ಶೇಕಡ 93.06 ಮತದಾನ: ತಾಲ್ಲೂಕಿನಲ್ಲಿ ಶೇಕಡ 93.06ರಷ್ಟು ಶಾಂತಿಯುತ ಮತದಾನವಾಗಿದೆ ಎಂದು ತಹಶೀಲ್ದಾರ್‌ ಟಿ.ಎಸ್‌. ಶಿವರಾಜ್‌ ತಿಳಿಸಿದ್ದಾರೆ.

ADVERTISEMENT

ತಾಲ್ಲೂಕಿನ ಮಧುರೆ ಮತಗಟ್ಟೆಯಲ್ಲಿ ಶೇಕಡ 100ರಷ್ಟು ಮತದಾನವಾಗಿದೆ. ಸಾಸಲು ಮತಗಟ್ಟೆಯಲ್ಲಿ ಶೇಕಡ 90.24ರಷ್ಟು ಮತದಾನ ನಡೆದಿದೆ. ಕಸಬಾ ಮತಗಟ್ಟೆಯಲ್ಲಿ ಶೇಕಡ 92.08ರಷ್ಟು ಮತಗಳು ಚಲಾವಣೆಯಾಗಿವೆ.

ಸಿಬ್ಬಂದಿಗೆ ಪಿಪಿಇ ಕಿಟ್‌:ಮತಗಟ್ಟೆಗೆ ನಿಯೋಜನೆಯಾ ಗಿದ್ದ ಎಲ್ಲಾ ಸಿಬ್ಬಂದಿ ಪಿಪಿಇ ಕಿಟ್‌ಗಳನ್ನು ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದ ದೃಶ್ಯ
ಕಂಡು ಬಂತು.

ಮತ ಚಲಾಯಿಸಲು ಬರುವ ಪ್ರತಿಯೊಬ್ಬರ ಕೈಗಳಿಗೂ ಟ್ಯಾನಿಟೈಸರ್‌ ಹಾಕಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.