
ಪ್ರಜಾವಾಣಿ ವಾರ್ತೆಪೊಲೀಸ್ (ಸಾಂಧರ್ಭಿಕ ಚಿತ್ರ)
– ಪ್ರಜಾವಾಣಿ ಚಿತ್ರ
ನಂದಗುಡಿ(ಹೊಸಕೋಟೆ): ಕಳವು ಆಗಿದ್ದ ಮೊಬೈಲ್ ಅನ್ನು ಪತ್ತೆ ಮಾಡಿ ನಂದಗುಡಿ ಪೊಲೀಸರು ಮಾಲೀಕನಿಗೆ ಹಿಂದಿರುಗಿಸಿದ್ದಾರೆ.
ಬೈಲ್ ನರ್ಸಪುರದ ಕದೀರ್ ಖಾನ್ ಎಂಬುದವರು ಅ.29ರಂದು ತಮ್ಮ ಮೊಬೈಲ್ ಕಳವಾಗಿದೆ ಎಂದು ದೂರು ದಾಖಲಿಸಿದ್ದರು. ದೂರಿನ ಅನ್ವಯ ನಂದಗುಡಿ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ, ಮೊಬೈಲ್ ಪತ್ತೆ ಮಾಡಿ ದೂರುದಾರ ಕದೀರ್ ಖಾನ್ ಅವರಿಗೆ ಹಿಂದಿರುಗಿಸಲಾಗಿದೆ ಎಂದು ಠಾಣೆಯ ಸಬ್ ಇನ್‌ಸ್ಪೆಕ್ಟರ್ ಶಾಂತರಾಮ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.