ಆನೇಕಲ್: ಹಣ ದುಪ್ಪಟ್ಟು ಮಾಡಲು ಹೋಗಿ ನಿವೃತ್ತ ಸೈನಿಕರು ಸೇರಿದಂತೆ ಹಲವು ಮಂದಿ ಸಾರ್ವಜನಿಕರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿರುವ ಘಟನೆ ಈಚೆಗೆ ನಡೆದಿದೆ. ತಾಲ್ಲೂಕಿನ ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರುಣ್ ಕುಮಾರ್ ಮತ್ತು ತಂಡದವರು ಎಕೆ ಟ್ರೇಡರ್ಸ್ ಹೆಸರಿನಲ್ಲಿ ಯೂನಿವರ್ ಕಾಯಿನ್ ಕ್ರಿಪ್ಟೋಕರೆನ್ಸಿಯಲ್ಲಿ ಮನಿ ಡಬ್ಲಿಂಗ್ ನಡೆಸುತ್ತಿದ್ದರು. ಈ ತಂಡ ತಾಲ್ಲೂಕಿನ ಕೆಲವರಿಂದ ಹಣ ಹೂಡಿಕೆ ಮಾಡಿಸಿಕೊಂಡು ಗ್ರಾಹಕರಿಗೆ ವಂಚಿಸಿರುವ ಘಟನೆ ನಡೆದಿದೆ. ನಿವೃತ್ತ ಸೈನಿಕರನ್ನು ಟಾರ್ಗೆಟ್ ಮಾಡಿ ಹಣ ಹೂಡಿಕೆ ಮಾಡಿಸುತ್ತಿದ್ದರು ಎನ್ನಲಾಗಿದೆ. ಪ್ರಾರಂಭದಲ್ಲಿ ಹಣ ಹೂಡಿಕೆ ಮಾಡಿಸಿ ಭರವಸೆ ನೀಡಿದಂತೆ ಹಣ ಮರುಪಾವತಿ ಮಾಡುತ್ತಿದ್ದರು.
ಅರುಣ್ ಕುಮಾರ್ ಮತ್ತು ತಂಡ ಎಕೆ ಟ್ರೇಡರ್ಸ್ ಕಂಪನಿ ನಡೆಸುತ್ತಿದ್ದರು. ಯೂನಿವರ್ ಕಾಯಿನ್ ನಡೆಸಿ ₹77 ಸಾವಿರ ಪಾವತಿ ಮಾಡಿದರೆ ಐದು ತಿಂಗಳಲ್ಲಿ ₹1.2ಲಕ್ಷ ನೀಡುತ್ತಿದ್ದರು.
ವಂಚನೆಗೊಳಗಾದ ನಿವೃತ್ತರಾದ ಸೈನಿಕ ಗೋವಿಂದರಾಜು, ಸುಬ್ರಮಣ್ಯಂ, ವೆಂಕಟೇಶ್ ತಮಿಳುನಾಡು, ಕರ್ನಾಟಕ ಸೇರಿದಂತೆ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.