ADVERTISEMENT

ನಾಡ‍ಪ್ರಭು ಕೊಡುಗೆ ಅನನ್ಯ

ಹೊಸಕೋಟೆ: ಕೆಂಪೇಗೌಡರ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 2:34 IST
Last Updated 1 ಜುಲೈ 2022, 2:34 IST
ಹೊಸಕೋಟೆಯ ಹಳೆ ಬಸ್‌ ನಿಲ್ದಾಣದ ಆವರಣದಲ್ಲಿ ನಡೆದ ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಪಟ್ಟನಾಯಕನಹಳ್ಳಿಯ ನಂಜಾವಧೂತ ಸ್ವಾಮೀಜಿ ಉದ್ಘಾಟಿಸಿದರು. ಶಾಸಕ ಶರತ್ ಬಚ್ಚೇಗೌಡ, ಸಂಸದ ಬಿ.ಎನ್. ಬಚ್ಚೇಗೌಡ, ಕೃಷ್ಣ ಬೈರೇಗೌಡ ಹಾಜರಿದ್ದರು
ಹೊಸಕೋಟೆಯ ಹಳೆ ಬಸ್‌ ನಿಲ್ದಾಣದ ಆವರಣದಲ್ಲಿ ನಡೆದ ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಪಟ್ಟನಾಯಕನಹಳ್ಳಿಯ ನಂಜಾವಧೂತ ಸ್ವಾಮೀಜಿ ಉದ್ಘಾಟಿಸಿದರು. ಶಾಸಕ ಶರತ್ ಬಚ್ಚೇಗೌಡ, ಸಂಸದ ಬಿ.ಎನ್. ಬಚ್ಚೇಗೌಡ, ಕೃಷ್ಣ ಬೈರೇಗೌಡ ಹಾಜರಿದ್ದರು   

ಹೊಸಕೋಟೆ: ‘ರಾಜ್ಯದಲ್ಲಿ ಹಲವಾರು ರಾಜರು ನಿರ್ಮಾಣ ಮಾಡಿದ ರಾಜಧಾನಿಗಳು ಅವನತಿ ಕಂಡಿವೆ. ಆದರೆ, ಕೆಂಪೇಗೌಡರು ಬೆಂಗಳೂರು ನಿರ್ಮಿಸುವ ಮೂಲಕ ವಿಶ್ವ ಪ್ರಸಿದ್ಧ ನಗರವನ್ನಾಗಿಸಿದ್ದಾರೆ’ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಗರದ ಹಳೆಯ ಬಸ್ ನಿಲ್ದಾಣದ ಆವರಣದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದಿಂದಬುಧವಾರ ನಡೆದನಾಡಪ್ರಭು ಕೆಂಪೇ ಗೌಡರಜಯಂತಿ ಕಾರ್ಯ ಕ್ರಮದ ಅಧ್ಯಕ್ಷತೆವಹಿಸಿಅವರು ಮಾತನಾಡಿದರು.

ಸಾಮಾನ್ಯವಾಗಿ ರಾಜ್ಯಗಳನ್ನು ನದಿ ಪಾತ್ರದಲ್ಲಿಕಟ್ಟಲಾಗುತ್ತದೆ. ಕೆಂಪೇಗೌಡರು ಬೆಂಗಳೂರನ್ನು 550 ವರ್ಷಗಳ ಹಿಂದೆ ನಿರ್ಮಾಣ ಮಾಡುವವೇಳೆ ದೂರದೃಷ್ಟಿಹೊಂದಿದ್ದರು. ಸಾವಿರಾರು ಕೆರೆಗಳು,ವ್ಯಾಪಾರ ವಹಿವಾಟಿಗೆ ವಿಶೇಷವಾದ ಪೇಟೆಗಳು ನಿರ್ಮಿಸಿದ್ದು ಅವರ ಹೆಗ್ಗಳಿಕೆ ಎಂದರು.

ADVERTISEMENT

ಬೆಂಗಳೂರು ಮಾದರಿ ಯಲ್ಲಿಯೇಹೊಸಕೋಟೆ ತಾಲ್ಲೂಕನ್ನು ಅಭಿವೃದ್ಧಿಪಡಿಸಿ ಒಕ್ಕಲಿಗರ ಜೊತೆ ಎಲ್ಲಾ ಸಮುದಾಯಕ್ಕೂ ಸಾಮಾಜಿಕ ನ್ಯಾಯ ಒದಗಿಸಲಾಗುವುದು ಎಂದುಭರವಸೆ ನೀಡಿದರು.

ಪಟ್ಟನಾಯಕನಹಳ್ಳಿಯ ನಂಜಾವಧೂತ ಸ್ವಾಮೀಜಿ ಮಾತ ನಾಡಿ,ಒಕ್ಕಲಿಗ ಸಮಾಜ ಕನ್ನಡ ನಾಡಿಗೆ ಹಲವಾರು ಕೊಡುಗೆಗಳನ್ನು ನೀಡಿದೆ. ಒಕ್ಕಲಿಗರು ಎಂದಿಗೂ ತಮ್ಮ ಒಗ್ಗಟ್ಟನ್ನು ಬಿಡಬಾರದು ಎಂದ ಸಾಮಾಜಿಕಮತ್ತು ರಾಜಕೀಯವಾಗಿ ಧ್ವನಿ ಎತ್ತಿದ್ದರಿಂದಜನಾಂಗದ ಅಭಿವೃದ್ಧಿನಿಗಮ ರಚನೆಯಾಗಿದೆ. ಶೋಷಿತರಿಗೆ ಸಹಾಯ ಮಾಡುವ ಮೂಲಕ ಹಾಗೂ ಉದ್ಯೋಗ ಸೃಷ್ಟಿಗೆಸಹಕಾರಿಯಾಗಿದೆ ಎಂದು ತಿಳಿಸಿದರು.

ಮಾಜಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ,ಒಕ್ಕಲಿಗ ಜನಾಂಗ ರೈತರಾಗಿ ಸಮಾಜದಲ್ಲಿ ಮನ್ನಣೆ ಪಡೆದಿದೆ. ನಾಲ್ಕನೇವರ್ಗವಾದ ಶೂದ್ರ ಜನಾಂಗವಾಗಿ ಗುರುತಿಸಿಕೊಂಡಿದ್ದು ಇತ್ತೀಚಿನ ದಿನಗಳಲ್ಲಿ ಸಮಾನತೆ ಕಾಣುತ್ತಿದೆಎಂದರು.

ಇತ್ತೀಚೆಗೆ ರಾಷ್ಟ್ರಕವಿ ಕುವೆಂಪು,ಡಾ.ಬಿ.ಆರ್‌. ಅಂಬೇಡ್ಕರ್, ನಾರಾಯಣ ಗುರು ಸೇರಿದಂತೆಹಲವು ಮಹನೀಯರಿಗೆ ಅವಮಾನ ಮಾಡುವ ಸಂಸ್ಕೃತಿ ಬೆಳೆಯುತ್ತಿದೆ. ಇದು ಸರಿಯಾದ ಬೆಳವಣಿಗೆಯಲ್ಲ.ಇದನ್ನುಸರಿಪಡಿಸಲು ಒಗ್ಗಟ್ಟಾಗಿ ರಾಜಕೀಯ ಶಕ್ತಿಯನ್ನುಬೆಳೆಸಿಕೊಳ್ಳಬೇಕಿದೆಎಂದು ತಿಳಿಸಿದರು.

ಸಂಸದಬಿ.ಎನ್‌. ಬಚ್ಚೇಗೌಡ ಮಾತನಾಡಿ, ಹೊಸಕೋಟೆ ಭಾಗದಲ್ಲಿ ಶ್ರೀಗಳು ಶಾಖಾ ಮಠನಿರ್ಮಿಸಬೇಕು. ಮಠಹಾಗೂ ವಿದ್ಯಾರ್ಜನೆಗೆ ಅಗತ್ಯವಿರುವ ಜಾಗದ ವ್ಯವಸ್ಥೆಯನ್ನು ತಾಲ್ಲೂಕಿನಒಕ್ಕಲಿಗ ಸಮುದಾಯದಿಂದ ಮಾಡಿಕೊಡ ಲಾಗುವುದುಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್, ಕುಮಾರ ಚಂದ್ರಶೇಖರ ಸ್ವಾಮೀಜಿ, ರಾಜ್ಯ ಒಕ್ಕಲಿಗರಸಂಘದ ಅಧ್ಯಕ್ಷ ಬಾಲಕೃಷ್ಣ ಮಾತನಾಡಿದರು.ಒಕ್ಕಲಿಗರಸಂಘದ ನಿರ್ದೇಶಕರಾದ ರಾಜಶೇಖರ್ ಗೌಡ, ಕೋಡಿಹಳ್ಳಿ ಸುರೇಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಕೋಡಿಹಳ್ಳಿ ಸೊಣ್ಣಪ್ಪ, ಬಮೂಲ್ ನಿರ್ದೇಶಕ ಹುಲ್ಲೂರು ಸಿ. ಮಂಜುನಾಥ್, ವಿಧಾನ ಪರಿಷತ್ ಸದಸ್ಯ ರವಿಹಾಜರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಸುಂಕ ವಸೂಲಾತಿ ಕೇಂದ್ರದಿಂದ ಕೆಇಬಿ ವೃತ್ತದವರೆಗೆ ಬೈಕ್ ಮೆರವಣಿಗೆ ನಡೆಯಿತು. ಕೆಇಬಿ ವೃತ್ತದಿಂದ ತಾಲ್ಲೂಕಿನ ವಿವಿಧೆಡೆಯಿಂದ ಆಗಮಿಸಿದ80ಕ್ಕೂ ಹೆಚ್ಚುಕೆಂಪೇಗೌಡರ ಭಾವಚಿತ್ರ ಹೊತ್ತ ಬೆಳ್ಳಿ ರಥಗಳು,ವೀರಗಾಸೆ, ಡೊಳ್ಳುಕುಣಿತದತಂಡಗಳ ಮೆರವಣಿಗೆ ನಡೆಯಿತು. ಎಸ್‌ಎಸ್‌ಎಲ್‌ಸಿಹಾಗೂ ದ್ವಿತೀಯ ಪಿಯುಪರೀಕ್ಷೆಯಲ್ಲಿ ಶೇ95ರಷ್ಟು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳನ್ನುಪುರಸ್ಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.