ADVERTISEMENT

ಆನೇಕಲ್: ಪಾರಂಪರಿಕ ನೇಕಾರಿಕೆ ಉಳಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 4:41 IST
Last Updated 8 ಆಗಸ್ಟ್ 2021, 4:41 IST
ಆನೇಕಲ್‌ನ ವೀವರ್ಸ್ ಕಾಲೊನಿಯಲ್ಲಿ ರಾಷ್ಟ್ರೀಯ ನೇಕಾರರ ದಿನ ಆಚರಿಸಲಾಯಿತು
ಆನೇಕಲ್‌ನ ವೀವರ್ಸ್ ಕಾಲೊನಿಯಲ್ಲಿ ರಾಷ್ಟ್ರೀಯ ನೇಕಾರರ ದಿನ ಆಚರಿಸಲಾಯಿತು   

ಆನೇಕಲ್:ಕೊರೊನಾದಿಂದಾಗಿ ನೇಕಾರರ ಬದುಕು ತೀವ್ರ ಸಮಸ್ಯೆಗೆ ಸಿಲುಕಿಕೊಂಡಿದೆ. ಹಾಗಾಗಿ, ಸರ್ಕಾರ ನೇಕಾರರಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕು. ನೇಕಾರರ ಪ್ರತಿ ಕುಟುಂಬಕ್ಕೆ ₹ 10 ಸಾವಿರ ಪರಿಹಾರ ನೀಡಬೇಕು’ ಎಂದು ಮುಖಂಡ ಮೋಹನ್‌ ತಿಳಿಸಿದರು.

ಪಟ್ಟಣದ ವೀವರ್ಸ್‌ ಕಾಲೊನಿಯಲ್ಲಿ ರಾಷ್ಟ್ರೀಯ ನೇಕಾರರ ದಿನಾಚರಣೆ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಪಾರಂಪರಿಕವಾಗಿ ನೇಕಾರಿಕೆ ವೃತ್ತಿಯ ಮೂಲಕ ಜೀವನವನ್ನು ನೂರಾರು ಮಂದಿ ರೂಪಿಸಿಕೊಂಡಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ನೇಕಾರಿಕೆಗೆ ಸೂಕ್ತ ಸೌಲಭ್ಯ ದೊರೆಯದೇ ಮೂಲೆಗುಂಪಾಗಿದೆ. ಪಾರಂಪರಿಕ ವೃತ್ತಿಯನ್ನು ಉಳಿಸಿಕೊಳ್ಳಬೇಕುಎಂದು ಹೇಳಿದರು.

ADVERTISEMENT

ನೇಕಾರರ ದಿನಾಚರಣೆ ಅಂಗವಾಗಿ ಕೈಮಗ್ಗಗಳಿಗೆ ಪೂಜೆ ಸಲ್ಲಿಸಿ ಸಿಹಿ ಹಂಚಲಾಯಿತು.

ಮುಖಂಡರಾದ ಕೃಷ್ಣ, ಚಿಕ್ಕಣ್ಣ, ರಾಮಕೃಷ್ಣ, ಸೋಮುಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.