ADVERTISEMENT

ರುದ್ರೇಶ್ವರ ಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 20:05 IST
Last Updated 5 ಮಾರ್ಚ್ 2019, 20:05 IST
ನೆಲಮಂಗಲದ ಅಡೇಪೇಟೆಯಲ್ಲಿರುವ ಶ್ರೀರುದ್ರೇಶ್ವರಸ್ವಾಮಿ ದೇವರ ಅಲಂಕೃತ ಮೂರ್ತಿ
ನೆಲಮಂಗಲದ ಅಡೇಪೇಟೆಯಲ್ಲಿರುವ ಶ್ರೀರುದ್ರೇಶ್ವರಸ್ವಾಮಿ ದೇವರ ಅಲಂಕೃತ ಮೂರ್ತಿ   

ನೆಲಮಂಗಲ: ಪಟ್ಟಣದ ಹೃದಯ ಭಾಗವಾದ ಅಡೇಪೇಟೆಯಲ್ಲಿ ಶ್ರೀರುದ್ರೇಶ್ವರಸ್ವಾಮಿಯ ಬ್ರಹ್ಮರಥೋತ್ಸವ ಮಂಗಳವಾರ ವೈಭವದಿಂದ ನಡೆಯಿತು.

ಪ್ರತಿ ವರ್ಷ ಮಹಾಶಿವರಾತ್ರಿ ಹಬ್ಬದ ಮರುದಿನ ಈ ರಥೋತ್ಸವ ನಡೆಯುತ್ತದೆ. ತಾಲ್ಲೂಕು ಮತ್ತು ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಶ್ರೀರುದ್ರೇಶ್ವರಸ್ವಾಮಿಗೆ ಹಣ್ಣುಕಾಯಿ ಅರ್ಪಿಸಿದರು.

ಬ್ರಹ್ಮರಥೋತ್ಸವಕ್ಕೂ ಮುನ್ನ ಸೋಮವಾರವೇ ಗಂಗಾದೇವತಾ ಗಣಪತಿ ಪೂಜೆ, ನವಗ್ರಹ ಕಲಶ ಸ್ಥಾಪನೆ ಹಾಗೂ ಹವನ ನಡೆಯಿತು.ಕರಡಿಮೇಳ, ವೀರಗಾಸೆ ನೃತ್ಯ, ಕಂಸಾಳೆ, ನಂದಿಧ್ವಜ ಜಾತ್ರೆಗೆ ರಂಗು ನೀಡಿದವು. ಪಟ್ಟಣದ ಪವಾಡ ಶ್ರೀಬಸವಣ್ಣ ದೇವರಮಠದ ಶ್ರೀಸಿದ್ದಲಿಂಗಸ್ವಾಮೀಜಿ ಉತ್ಸವಕ್ಕೆ ಚಾಲನೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.