ADVERTISEMENT

ನೆಲಮಂಗಲ: ಹೆದ್ದಾರಿಯಲ್ಲಿ ಬಸ್‌ ನಿಲುಗಡೆ ನಿಷೇಧ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 20:19 IST
Last Updated 11 ಅಕ್ಟೋಬರ್ 2019, 20:19 IST
ಕೆ.ಭೀಮಯ್ಯ
ಕೆ.ಭೀಮಯ್ಯ   

ನೆಲಮಂಗಲ: ಇಲ್ಲಿನ ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳ ನಿಲುಗಡೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಹೆದ್ದಾರಿಯಲ್ಲಿ ನಿಲುಗಡೆ ಮಾಡುವ ವಾಹನಗಳನ್ನು ವಶಕ್ಕೆ ಪಡೆಯುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿ
ಕಾರಿಗೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಪಟ್ಟಣದ ಮೂಲಕ ಹಾದುಹೋಗಿರುವ ಎಕ್ಸ್‌ಪ್ರೆಸ್‌ ಹೈವೆ ಬೆಂಗಳೂರಿಗೆ ಹಾಗೂ ರಾಜ್ಯದ ಹಲವು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ರಾಷ್ಟ್ರೀಯ ಹೆದ್ದಾರಿ 4ರ ಟೋಲ್‌ ರಸ್ತೆಗಳಲ್ಲಿ ಯಾವುದೇ ವಾಹನ ನಿಲುಗಡೆಗೆ ಅವಕಾಶವಿಲ್ಲ. ಆದರೂ, ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ಮತ್ತು ಖಾಸಗಿ ಬಸ್‌ಗಳು ಹೆದ್ದಾರಿಯಲ್ಲೇ ಪ್ರಯಾಣಿಕರನ್ನು ಇಳಿಸಿ, ಹತ್ತಿಸಿಕೊಳ್ಳುತ್ತಿವೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಸರ್ವಿಸ್‌ ರಸ್ತೆಯಲ್ಲಿ ಬಾರದೆ, ನಿಗದಿತ ಚೆಕ್‌ ಪೋಸ್ಟ್‌ ಬಳಿ ನಿಲುಗಡೆ ನೀಡದ ಹಾಗೂ ಹೆದ್ದಾರಿಯಲ್ಲಿ ಮಾತ್ರ ನಿಲುಗಡೆ ಕೊಡುವುದರ ವಿರುದ್ಧ ರಾಷ್ಟ್ರೀಯ ಕಿಸಾನ್‌ ಸಂಘಟನೆ, ರೋಟರಿ ಸಂಸ್ಥೆ, ಇತರೆ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದಿದ್ದವು.

ಜನರ ಮನವಿಗೆ ಸ್ಪಂದಿಸಿ ಸಾರಿಗೆ ಇಲಾಖೆ ನೆಲಮಂಗಲ ಪಟ್ಟಣದಲ್ಲಿ ಬಸ್‌ಗಳು ಸರ್ವಿಸ್‌ ರಸ್ತೆ ಹಾಗೂ ಸೊಂಡೆಕೊಪ್ಪ ಸರ್ಕಲ್‌ನಲ್ಲಿರುವ ಚೆಕ್‌ಪೋಸ್ಟ್‌ ಮೂಲಕ ಸಂಚ ರಿಸಲು ಸೂಚಿಸಿತ್ತು.

ADVERTISEMENT

ಅದಾಗ್ಯೂ, ಸಾರಿಗೆ ಇಲಾಖೆಯ ಸೂಚನೆ ಗಳನ್ನು ಧಿಕ್ಕರಿಸಿ ಹಲವು ಕೆಎಸ್‌ ಆರ್‌ಟಿಸಿ ಬಸ್‌ಗಳು ನೆಲಮಂಗಲ ದಲ್ಲಿ ನಿಲುಗಡೆಗೆ ಕೊಡುತ್ತಿರಲಿಲ್ಲ. ಕೆಲವು ಬಸ್‌ಗಳು ಹೆದ್ದಾರಿ ಯಲ್ಲೇ ನಿಲ್ಲುತ್ತಿವೆ. ಇದರಿಂದ ತುಮಕೂರು, ಬೆಂಗಳೂರಿಗೆ ಅಥವಾ ಇತರ ಜಿಲ್ಲೆಗಳಿಗೆ ಪ್ರಯಾಣಿಸಬೇಕಾದ ವಿದ್ಯಾರ್ಥಿಗಳು, ನೌಕರರು, ಸಾರ್ವಜನಿಕರು ಮತ್ತು ವೃದ್ಧರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

‘ಹಲವು ವರ್ಷಗಳಿಂದ ಹೋರಾಡು ತ್ತಿದ್ದರೂ ಸಮಸ್ಯೆ ಬಗೆಹರಿದಿಲ್ಲ ಆದೇಶಗಳು ಜಾರಿಯಾದ ಕೆಲವು ತಿಂಗಳುಗಳು ಮಾತ್ರ ಪಾಲನೆಯಾಗು ತ್ತವೆ. ಮತ್ತೆ ಮತ್ತೆ ಇಲಾಖೆಗಳಿಗೆ ಪತ್ರ ಬರೆದು ಜ್ಞಾಪಿಸಬೇಕಾಗುತ್ತದೆ.ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಕ್ರಮ ವಹಿಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿ, ಅಪಘಾತಗಳನ್ನು ತಡೆಯಲು ಕೋರುತ್ತಿದ್ದೇವೆ’ ಎಂದು ರಾಷ್ಟ್ರೀಯ ಕಿಸಾನ್‌ ಸಂಘಟನೆಯ ಉಪಾಧ್ಯಕ್ಷ ಕೆ.ಭೀಮಯ್ಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.