ADVERTISEMENT

ಅತ್ತಿಬೆಲೆ: ಗಾಂಜಾ ವಶ, ಒಬ್ಬನ ಸೆರೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 20:42 IST
Last Updated 6 ಸೆಪ್ಟೆಂಬರ್ 2020, 20:42 IST
ಗಾಂಜಾ ಮಾರುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಅತ್ತಿಬೆಲೆ ಪೊಲೀಸರು (ಬ್ಯಾಗ್ ಹಿಡಿದಿರುವವನು ಆರೋಪಿ)
ಗಾಂಜಾ ಮಾರುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಅತ್ತಿಬೆಲೆ ಪೊಲೀಸರು (ಬ್ಯಾಗ್ ಹಿಡಿದಿರುವವನು ಆರೋಪಿ)   

ಆನೇಕಲ್ : ಅತ್ತಿಬೆಲೆ ಕೈಗಾರಿಕಾ ಪ್ರದೇಶದ ಗೆಸ್ಟ್‌ಲೈನ್‌ ಬಳಿ ದಾಳಿ ನಡೆಸಿದ ಪೊಲೀಸರು ವ್ಯಕ್ತಿಯೊಬ್ಬರಿಂದ 1 ಕೆ.ಜಿ 250 ಗ್ರಾಂ ಗಾಂಜಾ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬಿಲಾಲ್‌ ಹುಸೇನ್‌(28) ಎಂದು ಗುರುತಿಸಲಾಗಿದ್ದು, ಆತ ಬಿಹಾರ ಮೂಲದವನು ಎಂದುಅತ್ತಿಬೆಲೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಸತೀಶ್‌ ತಿಳಿಸಿದ್ದಾರೆ.

‘ಆರೋಪಿ ತಟ್ಟನಹಳ್ಳಿ ಸಮೀಪದ ಅಮೆಜಾನ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ವಿಚಾರಣೆ ಸಂದರ್ಭದಲ್ಲಿ, ಆರೋಪಿಯು ಅತ್ತಿಬೆಲೆ ಕೈಗಾರಿಕಾ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ. ಅವನ
ಜೊತೆಗಿದ್ದ ಮತ್ತೊಬ್ಬ ಆರೋಪಿ ಇರ್ಫಾನ್‌ ಪಾಷಾ ಎಂಬಾತ ಪರಾರಿಯಾಗಿದ್ದಾನೆ. ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.