ADVERTISEMENT

ದೇವನಹಳ್ಳಿ: ಸ್ವಾತಂತ್ರ್ಯ ದಿನಾಚರಣೆ ಪಥಸಂಚಲನಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 15:41 IST
Last Updated 13 ಆಗಸ್ಟ್ 2024, 15:41 IST
ವಿಜಯಪುರ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ವಿದ್ಯಾರ್ಥಿಗಳು, ಬ್ಯಾಂಡ್ ಸೆಟ್ ಮತ್ತು ಪಥಸಂಚಲನದ ಕುರಿತು ತಾಲೀಮು ನಡೆಸಿದರು
ವಿಜಯಪುರ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ವಿದ್ಯಾರ್ಥಿಗಳು, ಬ್ಯಾಂಡ್ ಸೆಟ್ ಮತ್ತು ಪಥಸಂಚಲನದ ಕುರಿತು ತಾಲೀಮು ನಡೆಸಿದರು    

ವಿಜಯಪುರ(ದೇವನಹಳ್ಳಿ):ಆ.15ರಂದು ನಡೆಯಲಿರುವ 78ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯಲಿರುವ ಧ್ವಜಾರೋಹಣ ಹಾಗೂ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಪಥಸಂಚಲನ ನಡೆಸಿ, ಧ್ವಜವಂದನೆ ಸಲ್ಲಿಸಲು ವಿದ್ಯಾರ್ಥಿಗಳು ತಾಲೀಮು ನಡೆಸಿದರು.

ದೈಹಿಕ ಶಿಕ್ಷಕರು, ವಿದ್ಯಾರ್ಥಿಗಳಲ್ಲಿ ಬ್ಯಾಂಡ್ ಸೆಟ್ ತಂಡ, ಪಥ ಸಂಚಲನ ತಂಡಗಳಾಗಿ ವಿಂಗಡಿಸಿ ಅವರಿಗೆ ಧ್ವಜವಂದನೆ ಸಲ್ಲಿಸುವ ಕುರಿತು ಅಭ್ಯಾಸ ಮಾಡಿಸಿದರು. ವಿದ್ಯಾರ್ಥಿಗಳು, ಪಥಸಂಚಲನದಲ್ಲಿ ಪಾಲಿಸಬೇಕಾಗಿರುವ ಶಿಸ್ತು ಕುರಿತು ಅಭ್ಯಾಸ ಮಾಡಿದರು.

ಪೂರ್ವಸಿದ್ಧತೆ ಪರಿಶೀಲನೆ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಲಿರುವ ಜೂನಿಯರ್ ಕಾಲೇಜು ಮೈದಾನದಲ್ಲಿ ಪುರಸಭೆ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಕೈಗೊಂಡರು. ದೈಹಿಕ ಶಿಕ್ಷಕರು ಪಥ ಸಂಚಲನದ ಪಥಗಳನ್ನು ಸಿದ್ಧಪಡಿಸಿದರು. ಪುರಸಭೆ ಮುಖ್ಯಾಧಿಕಾರಿ ಜಿ.ಆರ್.ಸಂತೋಷ್ ಪೂರ್ವ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.