ADVERTISEMENT

`ವನ ಸಂಪತ್ತು ಉಳಿಯಲಿ' ನಾಟಕ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 12:39 IST
Last Updated 24 ಜನವರಿ 2020, 12:39 IST
ಚನ್ನಪಟ್ಟಣ ತಾಲ್ಲೂಕಿನ ಕೂರಣಗೆರೆ ಗ್ರಾಮದಲ್ಲಿ `ವನ ಸಂಪತ್ತು ಉಳಿಯಲಿ' ಪರಿಸರ ಜಾಗೃತಿ ಬೀದಿ ನಾಟಕ ನಡೆಯಿತು
ಚನ್ನಪಟ್ಟಣ ತಾಲ್ಲೂಕಿನ ಕೂರಣಗೆರೆ ಗ್ರಾಮದಲ್ಲಿ `ವನ ಸಂಪತ್ತು ಉಳಿಯಲಿ' ಪರಿಸರ ಜಾಗೃತಿ ಬೀದಿ ನಾಟಕ ನಡೆಯಿತು   

ಚನ್ನಪಟ್ಟಣ: ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಪ್ರತಿ ವರ್ಷ ಲಕ್ಷಾಂತರ ಎಕರೆ ಅರಣ್ಯ ಪ್ರದೇಶ ನಾಶವಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ ಎಂದು ಸಾಹಿತಿ ವಿಜಯ್ ರಾಂಪುರ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಕೂರಣಗೆರೆ ಗ್ರಾಮದಲ್ಲಿ ರಾಂಪುರದ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಗುರುವಾರ ಏರ್ಪಡಿಸಿದ್ದ `ವನ ಸಂಪತ್ತು ಉಳಿಯಲಿ' ಪರಿಸರ ಜಾಗೃತಿ ಬೀದಿ ನಾಟಕ ಪ್ರದರ್ಶನದಲ್ಲಿ ಮಾತನಾಡಿದರು.

‘ಒಂದೆಡೆ ಮಾನವ ಕಲ್ಯಾಣದ ಅಭಿವೃದ್ಧಿಯ ಹೆಸರಿನಲ್ಲಿ ಹಾಗೂ ಮತ್ತೊಂದೆಡೆ ಕಿಡಿಗೇಡಿಗಳು ಹಚ್ಚುವ ಬೆಂಕಿಯಿಂದ ಅರಣ್ಯ ನಾಶವಾಗುತ್ತಿದೆ. ಅಳಿವು-ಉಳಿವಿಗೆ ಅರಣ್ಯವೇ ಪ್ರಮುಖ ಕಾರಣ. ಜಾಗತಿಕ ತಾಪಮಾನ ಹೆಚ್ಚಳ, ಬರಗಾಲ, ಅಂತರ್ಜಲ ಮಟ್ಟ ಕುಸಿತ, ವಾಯು ಮಾಲಿನ್ಯ ಇತ್ಯಾದಿಗಳು ಸಂಭವಿಸಿ ಜೀವ ಸಂಕುಲದ ವಿನಾಶಕ್ಕೆ ನಾವೆ ನಾಂದಿ ಹಾಡುತ್ತಿದ್ದೇವೆ. ನಾವಿಂದು ಅಪಾಯದ ಅಂಚಿನಲ್ಲಿದ್ದು, ವನಸಂಪತ್ತನ್ನು ಉಳಿಸಿಕೊಳ್ಳುವ ಮೂಲಕ ಪರಿಸರ ಸಮತೋಲನಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ಕೂರಣಗೆರೆ ಗ್ರಾಮದ ಮುಖಂಡ ಕೆ.ಎಚ್. ಕೃಷ್ಣಪ್ಪ ಮಾತಾನಾಡಿ, ಆಗ್ನಿ ಅವಘಡದಿಂದ ಅನೇಕ ಪ್ರಾಣಿ-ಪಕ್ಷಿ ಸಂಕುಲ ಔಷಧಿಯ ಗಿಡಮರಗಳು ಸುಟ್ಟು ಕರಕಲಾಗುತ್ತಿವೆ. ಅನಾದಿ ಕಾಲದಿಂದಲೂ ಅರಣ್ಯವನ್ನು ಸಂರಕ್ಷಿಸಿಕೊಂಡಿದ್ದ ಗ್ರಾಮೀಣರು ಈ ಬಗ್ಗೆ ಚಿಂತಿಸುವ ಮೂಲಕ ಪರಿಸರ ಸಂರಕ್ಷಣೆಯ ಹೊಣೆಯನ್ನು ಹೊರಬೇಕಾಗಿದೆ ಎಂದರು.

ಯುವ ಕವಿಗಳಾದ ಅಬ್ಬೂರು ಶ್ರೀನಿವಾಸ್, ತುಂಬೇನಹಳ್ಳಿ ಕಿರಣ್ ರಾಜ್, ಅಂಗಡಿ ಗೋಪಾಲ್, ಮಾಜಿ ಛೇರ್ಮನ್ ಸಿದ್ದಲಿಂಗಯ್ಯ, ಮಲ್ಲಿಕಾ, ರಾಮಚಂದ್ರು, ರಾಜು, ರಾಮು, ವೆಂಕಟಯ್ಯ ವಿಜಯ್ ಕುಮಾರ್, ಅಪ್ಪಾಜಣ್ಣ, ಕರಿಯ, ರವಿ, ಪ್ರಕಾಶ್, ಮನೋಜ್ ಗೌಡ ಹಾಜರಿದ್ದರು.
ಪರಿಸರ ಜಾಗೃತಿ ಗೀತೆಗಳನ್ನು ಹಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.