ವಿಜಯಪುರ (ದೇವನಹಳ್ಳಿ): ಇಲ್ಲಿನ ಸಮೀಪದ ಕೋರಮಂಗಲ ಬಯಲು ಬಂದಿಖಾನೆ ವಾಸಿಗಳಿಗೆ ಇನ್ನರ್ ವೀಲ್ ಕ್ಲಬ್ ವಿಜಯಪುರ ವತಿಯಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬಯಲು ಬಂಧಿಖಾನೆಯ ಜೈಲರ್ ಬಸವರಾಜು ಮಾತನಾಡಿ, ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಬಂದಿಖಾನೆಯ ವಾಸಿಗಳ ಮನಸ್ಸಿಗೆ ಆಹ್ಲಾದತೆ ನೀಡುವ ಸಲುವಾಗಿ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಯಾವ್ಯಾವುದೋ ಕಾರಣಗಳಿಂದ ಮನಸ್ಸು ಕೆಡಿಸಿಕೊಂಡು ಅಪರಾಧಿಗಳಾಗಿ ಇಲ್ಲಿರುವವರ ಮನಸ್ಸಿಗೆ ಉಲ್ಲಾಸ, ನೆಮ್ಮದಿ ನೀಡಲು ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಖಾಸಗಿ ವಾಹಿನಿಯ ತೀರ್ಪುಗಾರ ಸಚಿನ್ ಶಿವರುದ್ರಪ್ಪ ತಿಳಿಸಿದರು.
ಸಹಾಯಕ ಜೈಲರ್ ಶ್ರೀದೇವಿ ಬಸಣ್ಣ, ವಿಜಯಪುರ ಪುರಸಭೆ ಮಾಜಿ ಅಧ್ಯಕ್ಷೆ ಅನಸೂಯಮ್ಮ ಸಂಪತ್ ಕುಮಾರ್, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷ ಮಾನಸ ಪ್ರದೀಪ್, ಭಾರತಿ ಶಿವಪ್ರಸಾದ್, ನಾಗರಾಜ್, ವೀಣಾ, ನಟ ಶೇಖರ್, ಬಂದಿಖಾನೆ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.