ADVERTISEMENT

ತಂಗುದಾಣ ಅವ್ಯವಸ್ಥೆಯ ಆಗರ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 3:17 IST
Last Updated 19 ಅಕ್ಟೋಬರ್ 2020, 3:17 IST
ಸೂಲಿಬೆಲೆಯ ಹೊಸ ಬಸ್‌ನಿಲ್ದಾಣದಲ್ಲಿರುವ ಪ್ರಯಾಣಿಕರ ತಂಗುದಾಣದ ನೋಟ
ಸೂಲಿಬೆಲೆಯ ಹೊಸ ಬಸ್‌ನಿಲ್ದಾಣದಲ್ಲಿರುವ ಪ್ರಯಾಣಿಕರ ತಂಗುದಾಣದ ನೋಟ   

ಸೂಲಿಬೆಲೆ: ಪಟ್ಟಣದ ಬಸ್‌ನಿಲ್ದಾಣ ಪ್ರಯಾಣಿಕರ ತಂಗುದಾಣವು ಕುಡುಕರ, ಭಿಕ್ಷುಕರ ಹಾಗೂ ಪ್ರಾಣಿಗಳ ವಾಸ ಸ್ಥಾನವಾಗಿದೆ. ಇದರಿಂದ ತೀವ್ರ ಸಮಸ್ಯೆಯಾಗುತ್ತಿದೆ ಎಂದು ನಾಗರಿಕರು ದೂರಿದ್ದಾರೆ.

ಸುತ್ತಮುತ್ತಲಿನ ಗ್ರಾಮಗಳಿಂದ ದಿನನಿತ್ಯ ಸಾವಿರಾರು ಪ್ರಯಾಣಿಕರು ನಗರ ಪ್ರದೇಶಗಳಿಗೆ ಹೋಗಲು ಸೂಲಿಬೆಲೆ ಹೋಬಳಿ ಕೇಂದ್ರಕ್ಕೆ ಬಂದು ಹೋಗುತ್ತಾರೆ. ಪಟ್ಟಣದ ಹೊಸ ಬಸ್‌ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಎರಡು ತಂಗುದಾಣಗಳನ್ನು ನಿರ್ಮಿಸಲಾಗಿದೆ. ಆದರೆ, ಇವುಗಳು ಅವ್ಯವಸ್ಥೆಯ ಆಗರವಾಗಿವೆ.

ಕೂಡಲೇ ಬಸ್‌ನಿಲ್ದಾಣವನ್ನು ಪ್ರಯಾಣಿಕರಿಗೆ ಬಳಕೆಯಾಗುವ ರೀತಿಯಲ್ಲಿ ಸ್ವಚ್ಛಗೊಳಿಸಬೇಕು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ವಕೀಲ ನರಸಿಂಹಮೂರ್ತಿ ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.