ADVERTISEMENT

ಹಲ್ಲೆಕೋರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2022, 4:58 IST
Last Updated 18 ಜುಲೈ 2022, 4:58 IST

ಹೊಸಕೋಟೆ: ಜೆಸಿಬಿ ಯಂತ್ರ ದಿಂದ ಕೆಲಸ ಮಾಡಿಸಿಕೊಂಡ ಹಣ ಕೇಳಿದ್ದಕ್ಕೆ ಹಣ ನೀಡಬೇಕಾದ ವ್ಯಕ್ತಿಯೊಬ್ಬ ಜೆಸಿಬಿ ಮಾಲೀಕನ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ ಘಟನೆ ಖಂಡಿಸಿ ಹೊಸಕೋಟೆ ಪೊಲೀಸ್ ಠಾಣೆ ಎದುರು ವೀರಶೈವ ಲಿಂಗಾಯತ ಸಮಾಜದ ಮುಖಂಡರು ಭಾನುವಾರ ಪ್ರತಿಭಟನೆ ನಡೆಸಿದರು.

ನಂದಗುಡಿ ಹೋಬಳಿ ಮಂಚಪ್ಪನಹಳ್ಳಿ ಗ್ರಾಮದ ರುದ್ರಪ್ಪ, ಪತ್ನಿ ಲತಾ, ಮಗ ವಿನಯ್ ಎಂಬುವರ ಮೇಲೆ ತಾವರೆಕೆರೆ ಗ್ರಾಮದ ವಿಜಯ್ ಕುಮಾರ್ ಎಂಬ ಯುವಕ 20 ಜನರ ತಂಡದೊಂದಿಗೆ ತೆರಳಿ ಹಲ್ಲೆ ಮಾಡಿದ್ದ ಎನ್ನಲಾಗಿದೆ.

ಜೆಸಿಬಿ ಯಂತ್ರದಿಂದ ಕೆಲಸ ಮಾಡಿಸಿಕೊಂಡು ಹಣ ನೀಡಿದ ಹಿನ್ನಲೆಯಲ್ಲಿ ರುದ್ರಪ್ಪನವರ ಮಗ ವಿನಯ್ ಕುಮಾರ್, ವಿಜಯ್ ಕುಮಾರ್ ಮನೆಗೆ ತೆರಳಿ ಹಣ ಕೇಳಿದ್ದರು.ಇದರಿಂದಕುಪಿತಗೊಂಡ ಆರೋಪಿ ವಿಜಯ್ ಕುಮಾರ್, ರುದ್ರಪ್ಪ ವಾಸವಿದ್ದ ತೋಟದ ಒಂಟಿ ಮನೆಯ ಬಳಿಗೆ 20ಕ್ಕೂ ಹೆಚ್ಚು ಯುವಕರ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ದೂರಿದರು.

ADVERTISEMENT

ಈ ಘಟನೆಯನ್ನುವೀರಶೈವ ಸಮಾಜದ ಮುಖಂಡರು ಖಂಡಿಸಿದರು.ಮುಖಂಡರಾದ ನವೀನ್, ನಕ್ಕನಹಳ್ಳಿ ನಂಜೇಗೌಡ, ಮಂಜುನಾಥ್, ಕಾರ್ತಿಕ್, ನಾಗರಾಜ್, ಪರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.