ದೊಡ್ಡಬಳ್ಳಾಪುರ: ತಾಲ್ಲೂಕಿನ ಮಾಕಳಿ ಬೆಟ್ಟದ ಸಾಲಿನ ಹೊಸಹಳ್ಳಿ ರಸ್ತೆಯಲ್ಲಿ ಭಾನುವಾರ ರಾತ್ರಿ ಹೆಬ್ಬಾವು ಕಾಣಿಸಿಕೊಂಡು ವಾಹನ ಸವಾರರಲ್ಲಿ ಕೆಲ ಕಾಲ ಆತಂಕ ಸೃಷ್ಟಿಸಿತ್ತು.
ಸಂಜೆ 7 ಗಂಟೆ ಸಮಯದಲ್ಲಿ ಹೊಸಹಳ್ಳಿ ದೊಡ್ಡಬಳ್ಳಾಪುರ ನಡುವಿನ ದೊಡ್ಡ ಹಳ್ಳದ ಸಮೀಪ ಸುಮಾರು 6 ರಿಂದ 8 ಅಡಿ ಉದ್ದದ ಹೆಬ್ಬಾವು ರಸ್ತೆ ದಾಟುತ್ತ ಹಳ್ಳದ ಸಾಲಿನ ಪೊದೆಗಳ ಕಡೆಗೆ ಸಾಗಿದೆ. ರಸ್ತೆಯಲ್ಲಿನ ಹೋಗುತ್ತಿದ್ದ ಬೈಕ್ ಹಾಗೂ ವಾಹನ ಸವಾರರು ಹಾವು ಸುರಕ್ಷಿತವಾಗಿ ತೆರಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಹಾವು ಸಾಗುತ್ತಿರುವ ವಿಡಿಯೋವನ್ನು ಶಿಕ್ಷಕ ಗೋವಿಂದರಾಜ್ ಸೆರೆಹಿಡಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.