ADVERTISEMENT

ಲೈಂಗಿಕ ಕಿರುಕುಳ: ತಲೆಮರೆಸಿಕೊಂಡಿದ್ದ ರೇಡಿಯೋಲಜಿಸ್ಟ್‌ ಬಂಧನ

ಮೊಬೈಲ್‌ ನೆಟ್‌ವರ್ಕ್‌ ಆಧಾರಿಸಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 12:43 IST
Last Updated 21 ನವೆಂಬರ್ 2025, 12:43 IST
ಜಯಕುಮಾರ್
ಜಯಕುಮಾರ್   

ಆನೇಕಲ್: ಸ್ಕ್ಯಾನಿಂಗ್‌ಗಾಗಿ ಬಂದಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಡಿ ರೇಡಿಯೋಲಜಿಸ್ಟ್‌ನನ್ನು ಆನೇಕಲ್‌ ಪೊಲೀಸರು ಪಾಂಡಿಚೆರಿಯಲ್ಲಿ ಬಂಧಿಸಿದ್ದಾರೆ.

ರೇಡಿಯೋಲೋಜಿಸ್ಟ್ ಜಯಕುಮಾರ್ ಬಂಧಿತ.

ನವೆಂಬರ್ 11ರಂದು ಆನೇಕಲ್‌ನ ಖಾಸಗಿ ಸ್ಕ್ಯಾನಿಂಗ್ ಕೇಂದ್ರಕ್ಕೆ ಬಂದಿದ್ದ ಮಹಿಳೆಗೆ ರೇಡಿಯೋಲೋಜಿಸ್ಟ್ ಜಯಕುಮಾರ್ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇಲೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಜಯಕುಮಾರ್ ತಲೆಮರಹಿಸಿಕೊಂಡಿದ್ದರು. ಆರೋಪಿಯ ಬಂಧನಕ್ಕಾಗಿ ಆನೇಕಲ್ ಪೊಲೀಸರು ಎರಡು ತಂಡಗಳನ್ನು ರಚಿಸಿಕೊಂಡು ಕಾರ್ಯಾಚರಣೆ ಕೈಗೊಂಡಿದ್ದರು.

ADVERTISEMENT

ಆರೋಪಿ ಜಯಕುಮಾರ್ ಪಾಂಡಿಚೆರಿಯಲ್ಲಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆಯಿತು. ಮೊಬೈಲ್ ನೆಟ್‌ವರ್ಕ್‌ ಆಧಾರಿಸಿ ಪಾಂಡಿಚೆರಿಯಲ್ಲಿ ಆರೋಪಿ ಜಯಕುಮಾರ್ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಆನೇಕಲ್ ಇನ್‌ಸ್ಪೆಕ್ಟರ್‌ ತಿಪ್ಪೇಸ್ವಾಮಿ ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.