ADVERTISEMENT

ಆನೇಕಲ್: ಶ್ರದ್ಧಾ ಭಕ್ತಿಯಿಂದ ರಥಸಪ್ತಮಿ ಆಚರಣೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 4:53 IST
Last Updated 29 ಜನವರಿ 2023, 4:53 IST
ಆನೇಕಲ್‌ ತಾಲ್ಲೂಕಿನ ಸಮಂದೂರಿನಲ್ಲಿ ಸೂರ್ಯ ನಾರಾಯಣಸ್ವಾಮಿ ಬ್ರಹ್ಮ ರಥೋತ್ಸವ ನಡೆಯಿತು(ಎಡಚಿತ್ರ). ಅತ್ತಿಬೆಲೆಯಲ್ಲಿ ಬೀರೇಶ್ವರ ಸ್ವಾಮಿ ಜಾತ್ರೆ ಪ್ರಯುಕ್ತ ತಲೆಯ ಮೇಲೆ ತೆಂಗಿನಕಾಯಿ ಹೊಡೆಯುವ ಪವಾಡ ನಡೆಯಿತು
ಆನೇಕಲ್‌ ತಾಲ್ಲೂಕಿನ ಸಮಂದೂರಿನಲ್ಲಿ ಸೂರ್ಯ ನಾರಾಯಣಸ್ವಾಮಿ ಬ್ರಹ್ಮ ರಥೋತ್ಸವ ನಡೆಯಿತು(ಎಡಚಿತ್ರ). ಅತ್ತಿಬೆಲೆಯಲ್ಲಿ ಬೀರೇಶ್ವರ ಸ್ವಾಮಿ ಜಾತ್ರೆ ಪ್ರಯುಕ್ತ ತಲೆಯ ಮೇಲೆ ತೆಂಗಿನಕಾಯಿ ಹೊಡೆಯುವ ಪವಾಡ ನಡೆಯಿತು   

ಆನೇಕಲ್: ತಾಲ್ಲೂಕಿನ ಸಮಂದೂರಿನಲ್ಲಿ ಸೂರ್ಯ ನಾರಾಯಣಸ್ವಾಮಿ ಬ್ರಹ್ಮ ರಥೋತ್ಸವ ಸಡಗರದಿಂದ ನೆರವೇರಿತು. ರಥಸಪ್ತಮಿ ಪ್ರಯುಕ್ತ ಆಯೋಜಿಸಿದ್ದ ರಥೋತ್ಸವದಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

ರಥೋತ್ಸವದ ಅಂಗವಾಗಿ ಸ್ವಾಮಿಗೆ ವಿಶೇಷ ಅಲಂಕಾರ, ಪೂಜೆ, ಜಯಾದಿ ಹೋಮ, ನವಗ್ರಹ ಹೋಮ, ಗಣಹೋಮ, ಪೂರ್ಣ ಹೋಮ ನೆರವೇರಿಸಲಾಯಿತು.

ತಾಲ್ಲೂಕಿನ ಏಕೈಕ ಸೂರ್ಯ ನಾರಾಯಣಸ್ವಾಮಿ ದೇವಾಲಯದಲ್ಲಿನ ಉತ್ಸವ ಮೂರ್ತಿಯನ್ನು ಅಲಂಕೃತ ರಥದಲ್ಲಿ ಕೂರಿಸಲಾಯಿತು. ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥಸಪ್ತಮಿ ಅಂಗವಾಗಿ ಗ್ರಾಮದ 17 ಗ್ರಾಮದೇವತೆಗಳ ಪಲ್ಲಕ್ಕಿ ಉತ್ಸವ ಮತ್ತು ಕರಗ ಮಹೋತ್ಸವ ನಡೆಯಿತು.

ADVERTISEMENT

ರಥಸಪ್ತಮಿ ಆಚರಣೆ : ತಾಲ್ಲೂಕಿನ ವಿವಿಧೆಡೆ ರಥಸಪ್ತಮಿ ಅಂಗವಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ, ಉತ್ಸವಗಳು ವಿಜೃಂಭಣೆಯಿಂದ
ನಡೆದವು.

ತಾಲ್ಲೂಕಿನ ಸಬ್‌ಮಂಗಲದ ಮುನೇಶ್ವರ ಸ್ವಾಮಿ ದೇವಾಲಯದಲ್ಲಿ ರಥಸಪ್ತಮಿ ಪ್ರಯುಕ್ತ ಮುನೇಶ್ವರ ಸ್ವಾಮಿ ಜಾತ್ರೆಯು ವೈಭವದಿಂದ ನಡೆಯಿತು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸಮಂದೂರು, ಗುಡ್ಡನಹಳ್ಳಿ, ತಮಿಳುನಾಡಿನ ಕೊಮಾರನಹಳ್ಳಿ ಸೇರಿದಂತೆ ವಿವಿಧ ಗ್ರಾಮದ 35ಕ್ಕೂ ಹೆಚ್ಚು ಗ್ರಾಮದೇವತೆಗಳ ಪಲ್ಲಕ್ಕಿ ಉತ್ಸವ ನಡೆಯಿತು. ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಬೀರೇಶ್ವರ ಸ್ವಾಮಿ ಜಾತ್ರೆ: ತಾಲ್ಲೂಕಿನ ಅತ್ತಿಬೆಲೆಯ ಶ್ರೀಬೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಗಣಪತಿ ಸ್ಕಂದ ಹೋಮ, ನವಗ್ರಹ ಹೋಮ, ಮೂಲದೇವತಾ ಹೋಮ, ಬಸವನ ಪೂಜೆ, ಗಂಗಾಪೂಜೆ ನಡೆಸಲಾಯಿತು. ತಲೆಯ ಮೇಲೆ ತೆಂಗಿನಕಾಯಿ ಪವಾಡ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.