ಹೊಸಕೋಟೆ: ಹೊಸಕೋಟೆ ಪೊಲೀಸರು ಮಂಗಳವಾರ ಸಂಜೆ ₹25 ಲಕ್ಷ ಬೆಲೆ ಬಾಳುವ 11ಕ್ವಿಂಟಲ್ ತೂಕದ 102 ತುಂಡು ರಕ್ತಚಂದನ ವಶಪಡಿಸಿಕೊಂಡಿದ್ದಾರೆ.
ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಿಂದ ರಕ್ತಚಂದನ ಮರದ ತುಂಡುಗಳನ್ನು ತರಿಸಿಕೊಂಡು, ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಟ್ರಾನ್ಸ್‌ಪೋರ್ಟ್ ಕಂಪನಿ ಸರಕು ಸಾಗನೆ ವಾಹನದಲ್ಲಿ ಸಾಗಿಸುವಾಗ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಾಗಾಟಕ್ಕೆ ಬಳಸಿದ ಗೂಡ್ಸ್ ವಾಹನವನ್ನು ಜಪ್ತಿಪಡಿಸಿಕೊಂಡಿದ್ದಾರೆ ಎಂದು ಡಿವೈಎಸ್‌ಪಿ ಮಲ್ಲೇಶ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಿರುಮಲಶೆಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯ ಕಟ್ಟಿಗೆನಹಳ್ಳಿ ಗ್ರಾಮದ ಏಜಾಜ್ ಷರೀಫ್ (47), ಪಯಾಜ್ ಷರೀಫ್ (47) ಮತ್ತು ಸಾದಿಕ್ ಖಾನ್ (34), ತಬ್ರೆಜ್ ಷರೀಫ್, ಹರಿಯಾಣದ ಹಿಸ್ಸಾರದ ವಿಷ್ಣು ಕುಮಾರ್, ವಿಕಾಶ ಕುಮಾರ್, ರಕ್ತಚಂದನ ಪೂರೈಸಿದ ತಮಿಳುನಾಡು, ಆಂಧ್ರ ಪ್ರದೇಶದ ಶಿವು, ದರ್ಶನ್ ಕುಮಾರ್ ಎಂಬುವರನ್ನು ಬಂಧಿಸಿದ್ದಾರೆ.
ಹೊಸಕೋಟೆಯ ಕೊಳ್ತ್ತರು ಗ್ರಾಮದ ಟ್ರಾನ್ಸ್‌ಪೋರ್ಟ್ ಕಂಪನಿ ಮೂಲಕ ಹರಿಯಾಣದ ವಿಷ್ಣುಕುಮಾರ್ ಎಂಬುವವರಿಗೆ ಪಾರ್ಸಲ್ ಮಾಡಲು ಯತ್ನಿಸಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡರು.
ಪೊಲೀಸ್ ಇನ್‌ಸ್ಪೆಕ್ಟರ್ ಗೋವಿಂದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.