ADVERTISEMENT

21ಕ್ಕೆ ಧರ್ಮ ಜಾಗೃತಿ ಸಮ್ಮೇಳನ, ಅಡ್ಡ ಪಲ್ಲಕ್ಕಿ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 7:17 IST
Last Updated 18 ಜುಲೈ 2019, 7:17 IST
ಹೊಸಕೋಟೆಯಲ್ಲಿ ನಡೆದ ವೀರಶೈವ ಲಿಂಗಾಯತರ ಸಭೆಯಲ್ಲಿ ರಾಜ್ಯ ವೀರಶೈವ ಲಿಂಗಾಯತ ಯುವ ವೇದಿಕೆಯ ಉಪಾಧ್ಯಕ್ಷ ನಂಜೇಗೌಡ, ತಾಲ್ಲೂಕು ಅಧ್ಯಕ್ಷ ಕಾಂತರಾಜ್ ಆರಾಧ್ಯ, ಉಪಾಧ್ಯಕ್ಷರಾದ ಎಂ.ಆರ್. ಉಮೇಶ್ ಸೂಲಿಬೆಲೆ, ಡಿ.ಎಸ್. ಪರಮೇಶ್, ಪ್ರದೀಪ್, ಮಲ್ಲಿಕಾರ್ಜುನ, ಮುಖಂಡರು ಭಾಗವಹಿಸಿದ್ದರು
ಹೊಸಕೋಟೆಯಲ್ಲಿ ನಡೆದ ವೀರಶೈವ ಲಿಂಗಾಯತರ ಸಭೆಯಲ್ಲಿ ರಾಜ್ಯ ವೀರಶೈವ ಲಿಂಗಾಯತ ಯುವ ವೇದಿಕೆಯ ಉಪಾಧ್ಯಕ್ಷ ನಂಜೇಗೌಡ, ತಾಲ್ಲೂಕು ಅಧ್ಯಕ್ಷ ಕಾಂತರಾಜ್ ಆರಾಧ್ಯ, ಉಪಾಧ್ಯಕ್ಷರಾದ ಎಂ.ಆರ್. ಉಮೇಶ್ ಸೂಲಿಬೆಲೆ, ಡಿ.ಎಸ್. ಪರಮೇಶ್, ಪ್ರದೀಪ್, ಮಲ್ಲಿಕಾರ್ಜುನ, ಮುಖಂಡರು ಭಾಗವಹಿಸಿದ್ದರು   

ಹೊಸಕೋಟೆ: ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಜುಲೈ 21ರಂದು ನಡೆಯುವ ಧರ್ಮ ಜಾಗೃತಿ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು ರಂಭಾಪುರಿ ಮಠದ ಪ್ರಸನ್ನ ರೇಣುಕಾಚಾರ್ಯರ ನೇತೃತ್ವದಲ್ಲಿ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಡ್ಡ ಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ತಾಲ್ಲೂಕಿನ ವೀರಶೈವ ಲಿಂಗಾಯತ ಸಮುದಾಯದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ವೀರಶೈವ ಲಿಂಗಾಯತರ ಯುವ ವೇದಿಕೆಯ ರಾಜ್ಯ ಉಪಾಧ್ಯಕ್ಷ ಎನ್.ಬಿ. ನಂಜೇಗೌಡ ಮನವಿ ಮಾಡಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿದ್ದರು.

‘ವೇದಿಕೆ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರು ಹಾಗೂ ಸಮಾಜದ ಮುಖಂಡರು ಹಾಗೂ ಸಾವಿರಾರು ಶರಣರು ಭಾಗವಹಿಸಲಿದ್ದಾರೆ’ ಎಂದರು.

ADVERTISEMENT

ಅಂದು ಮುಂಜಾನೆ 9.30ಕ್ಕೆ ಬೆಂಗಳೂರಿನ ಮೇಖ್ರಿ ವೃತ್ತದಿಂದ ಶ್ರೀಗಳ ಮೆರವಣಿಗೆ ಪ್ರಾರಂಭಿಸಲಾಗುವುದು. ಸಾವಿರಾರು ಭಕ್ತರು ಮತ್ತು ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. 10.30ಕ್ಕೆ ವೇದಿಕೆ ಕಾರ್ಯಕ್ರಮಗಳು ಪ್ರಾರಂಭವಾಗುತ್ತದೆ. ಕಾರ್ಯಕ್ರಮದಲ್ಲಿ ರಾಜ್ಯದ ಮೂಲೆಮೂಲೆಗಳಿಂದ ಶರಣರು ಭಾಗವಹಿಸಲಿದ್ದು ತಾಲ್ಲೂಕಿನ ಶರಣರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸುವಂತೆ ಮನವಿ ಮಾಡಿದರು.

ತಾಲ್ಲೂಕು ವೀರಶೈವ ಲಿಂಗಾಯತ ಯುವ ವೇದಿಕೆ ಅಧ್ಯಕ್ಷರಾಗಿ ಕೆ. ಮಲ್ಲಸಂದ್ರದ ಎಂ. ಕಾಂತರಾಜು ಹಾಗೂ ನಗರದ ಅಧ್ಯಕ್ಷರನ್ನಾಗಿ ಎನ್.ಸಿ. ಮಂಜುನಾಥ್ ಅವರನ್ನು ಆಯ್ಕೆಮಾಡಿ ನಂಜೇಗೌಡರು ಅದೇಶ ಪತ್ರವನ್ನು ನೀಡಿದರು. ಸಂಘಟನೆ ಹಾಗೂ ಸಮದಾಯದ ಅಭಿವೃದ್ಧಿಗೆ ಶ್ರಮಿಸುವಂತೆ ಅವರು ಕರೆ ನೀಡಿದರು.

ತಾಲ್ಲೂಕು ಅಧ್ಯಕ್ಷರಾದ ಕಾಂತರಾಜ್ ಆರಾಧ್ಯ, ಉಪಾಧ್ಯಕ್ಷರಾದ ಎಂ.ಆರ್. ಉಮೇಶ್ ಸೂಲಿಬೆಲೆ, ಡಿ.ಎಸ್. ಪರಮೇಶ್, ಪ್ರದೀಪ್, ಮಲ್ಲಿಕಾರ್ಜುನ ಹಾಗು ತಾಲ್ಲೂಕಿನ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.