ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿಯಲ್ಲಿ ಭಾನುವಾರ ಬೆಳಗಿನ ಜಾವ ಲಾರಿ ಹರಿದು ರಸ್ತೆ ಬದಿ ಮೊಪೆಡ್‌ನಲ್ಲಿ ಹೋಗುತ್ತಿದ್ದ ಬಿಹಾರ ಮೂಲದ ಯುವಕನ ಬಿಕ್ಕುಕುಮಾರ್ (18) ಮೃತಪಟ್ಟಿದ್ದಾನೆ.
ದೊಡ್ಡಬಳ್ಳಾಪುರ ಕಡೆಯಿಂದ ಬಾಶೆಟ್ಟಿಹಳ್ಳಿ ಕಡೆಗೆ ಬಿಕ್ಕುಕುಮಾರ್ ಮೊಪೆಡ್‌ನಲ್ಲಿ ತೆರಳುತ್ತಿದ್ದಾಗ ಬಾಶೆಟ್ಟಿಹಳ್ಳಿ ಕಡೆಯಿಂದ ಬಂದ ಸಿಮೆಂಟ್ ಲಾರಿ ಪೆಟ್ರೋಲ್ ಬಂಕ್ ಬಳಿ ಡಿವೈಡರ್ ಮೊಪೆಡ್‌ಗೆ ಡಿಕ್ಕಿ ಹೊಡೆದಿದೆ ಪೊಲೀಸರು ತಿಳಿಸಿದ್ದಾರೆ.
ಮೊದಲಿಗೆ ಚಾಲಕನ ನಿಯಂತ್ರಣ ತಪ್ಪಿ ಕೆಸರಲ್ಲಿ ಲಾರಿ ಸಿಲುಕಿದೆ ಎಂದು ಕಂಡು ಬಂತು. ಬಳಿಕ ಪರಿಶೀಲನೆ ನಡೆಸಿದಾಗ ಲಾರಿಯ ಚಕ್ರದ ಅಡಿ ಬಿಕ್ಕು ಕುಮಾರ್ ಮೃತ ದೇಹ ಹಾಗೂ ಮೊಪೆಡ್ ಕಂಡುಬಂದಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.