ADVERTISEMENT

‘ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಹಿರಿದು’

ಚಂದಾ‍ಪುರದಲ್ಲಿ ನೆಹರೂ ಯುವ ಕೇಂದ್ರದ ಸಂಸ್ಥಾ‍ಪನಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 6:03 IST
Last Updated 26 ನವೆಂಬರ್ 2020, 6:03 IST
ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ನೆಹರೂ ಯುವ ಕೇಂದ್ರದ ಸಂಸ್ಥಾಪನಾ ದಿನಾಚರಣೆಯನ್ನು ಚಿನ್ಮಯ ಸೇವಾ ಸಂಸ್ಥೆಯ ಅಧ್ಯಕ್ಷ ಚಿನ್ನಪ್ಪ ವೈ. ಚಿಕ್ಕಹಾಗಡೆ ಉದ್ಘಾಟಿಸಿದರು
ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ನೆಹರೂ ಯುವ ಕೇಂದ್ರದ ಸಂಸ್ಥಾಪನಾ ದಿನಾಚರಣೆಯನ್ನು ಚಿನ್ಮಯ ಸೇವಾ ಸಂಸ್ಥೆಯ ಅಧ್ಯಕ್ಷ ಚಿನ್ನಪ್ಪ ವೈ. ಚಿಕ್ಕಹಾಗಡೆ ಉದ್ಘಾಟಿಸಿದರು   

ಆನೇಕಲ್: ‘ದೇಶದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಅವಶ್ಯಕ. ಹಾಗಾಗಿ ಯುವಕರು ರಚನಾತ್ಮಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಅಭಿವೃದ್ಧಿಗೆ ಕೊಡುಗೆ ನೀಡಬೇಕು’ ಎಂದು ಚಿನ್ಮಯ ಸೇವಾ ಸಂಸ್ಥೆ ಅಧ್ಯಕ್ಷ ಚಿನ್ನಪ್ಪ ವೈ. ಚಿಕ್ಕಹಾಗಡೆ ತಿಳಿಸಿದರು.

ತಾಲ್ಲೂಕಿನ ಚಂದಾಪುರದಲ್ಲಿ ನೆಹರೂ ಯುವ ಕೇಂದ್ರ, ಚಿನ್ಮಯ ಸೇವಾಸಂಸ್ಥೆ ಸಹಯೋಗದಡಿ ಆಯೋಜಿಸಿದ್ದ ನೆಹರೂ ಯುವ ಕೇಂದ್ರದ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದರು.

ನೆಹರೂ ಯುವ ಕೇಂದ್ರ ಯುವಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಗ್ರಾಮೀಣ ಭಾಗಗಳಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಿದೆ. ವಿವಿಧ ತರಬೇತಿ ನಡೆಸುತ್ತಿದೆ. ಯುವಜನರು ತರಬೇತಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಜಿಎಂಆರ್‌ ಎಲೈಟ್‌ ಅಕಾಡೆಮಿ ಡಾ.ಜಿ. ಮುನಿರಾಜು ಮಾತನಾಡಿ, ಯುವಶಕ್ತಿ ದೇಶದ ಶಕ್ತಿಯಾಗಬೇಕು. ಭಾರತೀಯ ಪರಂಪರೆ, ಮೌಲ್ಯ ಉಳಿಸಿ ಬೆಳೆಸಬೇಕಾಗಿದೆ ಎಂದರು.

ಮುಖಂಡರಾದ ಟಿ.ವಿ. ಬಾಬು, ರತ್ನಮ್ಮ, ಕೆ. ಮಹೇಶ್‌, ಸಿ.ಆರ್‌. ವಿಜಯಕುಮಾರ್‌, ಎಎಸ್‌ಬಿ ಹಳೆ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ಜಿ. ಆನಂದ್‌, ಉಪಾಧ್ಯಕ್ಷ ರಮೇಶ್, ಪದಾಧಿಕಾರಿಗಳಾದ ಗಾಯತ್ರಿ, ನಾರಾಯಣ್, ಸಿ. ಗೋವಿಂದಪ್ಪ, ಮೋಹನ್‌ಕುಮಾರ್‌, ದೇವರಾಜು, ಲಕ್ಷ್ಮೀ ಶ್ರೀನಾಥ್‌, ರವಿಕುಮಾರ್, ವೀಣಾ, ಮಾದೇಶ್‌, ಟಿ.ಎಸ್‌. ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.