ADVERTISEMENT

ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 13:28 IST
Last Updated 23 ಫೆಬ್ರುವರಿ 2020, 13:28 IST
ನಿವೃತ್ತ ಪ್ರಾಧ್ಯಾಪಕ ಪ್ರೊ.ಚಂದ್ರಪ್ಪ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿದರು
ನಿವೃತ್ತ ಪ್ರಾಧ್ಯಾಪಕ ಪ್ರೊ.ಚಂದ್ರಪ್ಪ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿದರು   

ದೊಡ್ಡಬಳ್ಳಾಪುರ: ಶಿಕ್ಷಣ ಕ್ಷೇತ್ರ ವ್ಯಾವಹಾರಿಕವಾಗುತ್ತಿದೆ; ಸಂಬಂಧಗಳು ಕಳಚಿಕೊಳ್ಳುತ್ತಿವೆ. ಪ್ರಾದೇಶಿಕ ಮೌಲ್ಯಗಳನ್ನು ಮರೆ ಮಾಡುತ್ತಿರುವ ಆಂಗ್ಲಶಾಲೆಗಳು ನಗರ ಕೇಂದ್ರಗಳಲ್ಲಿ ಮೂಲೆ ಮೂಲೆಗೆ ಆಕರ್ಷಕ ಕಟ್ಟಡಗಳೊಂದಿಗೆ ವಿಜೃಂಭಿಸುತ್ತಿವೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಚಂದ್ರಪ್ಪ ಹೇಳಿದರು.

ಅವರು ಗುಂಡಸಂದ್ರದ ಜಿ.ಕೆ.ನ್ಯಾಷನಲ್ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಜಿ.ಕೆ.ನ್ಯಾಷನಲ್‌ ಶಾಲೆ ಗ್ರಾಮೀಣ ಭಾಗದಲ್ಲಿ ಆಂಗ್ಲ ಶಾಲೆಯನ್ನು ತೆರೆದು ಸ್ಥಳಿಯ ಭಾಷೆಗಾಗಲಿ, ಭಾಂದವ್ಯಕ್ಕಾಗಲಿ ಧಕ್ಕೆ ಬಾರದಂತೆ ಬಹುಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯೆ ಕೊಡುತ್ತಿರುವುದು ಶ್ಲಾಘನೀಯ ಎಂದರು.

ADVERTISEMENT

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಲಹೆಗಾರರು ಮತ್ತು ಶಿಕ್ಷಣ ತಜ್ಞರಾದ ಗೋಪಾಲಕೃಷ್ಣ ವಹಿಸಿದ್ದರು. ರಾಜ್ಯ ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಪರಿಷತ್ ಸರ್ಕಾರಿ ನೌಕರರ ಸಂಘದ ಸದಸ್ಯ ಎಚ್.ಕೆ.ಮಂಜುನಾಥ್, ಶಾಲಾ ಸಂಸ್ಥಾಪಕಿ ಅಕ್ಕಯ್ಯಮ್ಮ, ಮುಖ್ಯಶಿಕ್ಷಕ ಜೆ.ಕೆ.ದೀಪು, ಶಿಕ್ಷಕ ನರೇಂದ್ರ ಇದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.