ADVERTISEMENT

ದೊಡ್ಡಬಳ್ಳಾಪುರ: ಮನೆ ಹೊಕ್ಕಿದ್ದ ಕೊಳಕ ಮಂಡಲ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 15:37 IST
Last Updated 11 ಜೂನ್ 2025, 15:37 IST
ದೊಡ್ಡಬಳ್ಳಾಪುರದ ಕರೇನಹಳ್ಳಿಯಲ್ಲನ ಮನೆಯೊಂದರಲ್ಲಿ ಬುಧವಾರ ಕಂಡು ಬಂದ ಕೊಳಕ ಮಂಡಲ ಹಾವನ್ನು ಉರಗ ರಕ್ಷಕ ಉಲ್ಲಾಸ್ ಹಿಡಿದು ಕಾಡಿಗೆ ಬಿಟ್ಟರು   
ದೊಡ್ಡಬಳ್ಳಾಪುರದ ಕರೇನಹಳ್ಳಿಯಲ್ಲನ ಮನೆಯೊಂದರಲ್ಲಿ ಬುಧವಾರ ಕಂಡು ಬಂದ ಕೊಳಕ ಮಂಡಲ ಹಾವನ್ನು ಉರಗ ರಕ್ಷಕ ಉಲ್ಲಾಸ್ ಹಿಡಿದು ಕಾಡಿಗೆ ಬಿಟ್ಟರು      

ದೊಡ್ಡಬಳ್ಳಾಪುರ: ನಗರದ ಕರೇನಹಳ್ಳಿ ಅಭಯ ಚೌಡೇಶ್ವರಿ ದೇವಾಲಯದ ಹಿಂಭಾಗದ ಮನೆಯೊಂದಕ್ಕೆ ನುಗ್ಗಿದ ಕೊಳಕ ಮಂಡಲ ಹಾವುನ್ನು ಉರಗ ರಕ್ಷಕ ಉಲ್ಲಾಸ್ ರಕ್ಷಿಸಿ, ಕಾಡಿಗೆ ಬಿಟ್ಟಿದ್ದಾರೆ.

ಈ ಕೊಳಕ ಮಂಡಲ ಹಾವು ಸುಮಾರು ನಾಲ್ಕು ವರ್ಷದ್ದು ಎನ್ನಲಾಗುತ್ತಿದ್ದು, 3.5 ಅಡಿ ಉದ್ದವಿದೆ.

ಇದು ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿ ಹೆಚ್ಚಾಗಿ ಓಡಾಡುವ ಕಾರಣ, ಹೆಚ್ಚಿನ ಪೊದೆಗಳು ಇರುವ ಕಡೆಗಳಲ್ಲಿ ರಾತ್ರಿ ವೇಳೆ ಹೊರಗೆ ನಡೆದು ಹೋಗುವಾಗ ಕಡ್ಡಾಯವಾಗಿ ಟಾರ್ಚ್ ಲೈಟ್‌ ಗಳನ್ನು ಬಳಸಬೇಕಿದೆ. ಜೊತೆಗೆ ಮನೆಯ ಸುತ್ತಮುತ್ತಲಿನ ಸಂದಿಗಳಲ್ಲಿ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು ಎನ್ನುತ್ತಾರೆ ಉರಗ ರಕ್ಷಕ ಉಲ್ಲಾಸ್.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.