ADVERTISEMENT

ಇಂದು ಸಾಯಿಬಾಬಾ ಮಂದಿರದ ದಶಮಾನೋತ್ಸವ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 13:21 IST
Last Updated 23 ಫೆಬ್ರುವರಿ 2019, 13:21 IST
ಸಾಯಿಬಾಬಾ ವಿಗ್ರಹ
ಸಾಯಿಬಾಬಾ ವಿಗ್ರಹ   

ಹೊಸಕೋಟೆ: ಇಲ್ಲಿನ ಬ್ರಾಹ್ಮಣರ ಬೀದಿಯಲ್ಲಿರುವ ಸಾಯಿಬಾಬಾ ಮಂದಿರವು ನಿರ್ಮಾಣವಾಗಿ ಹತ್ತು ವರ್ಷ ಕಳೆದಿದೆ.

10ನೆಯ ವಾರ್ಷಿಕೋತ್ಸವದ ಅಂಗವಾಗಿ ಫೆ.24ರಂದು ವಿಷ್ಣು ಸಹಸ್ರನಾಮ ಹೋಮ, ಬಾಬಾರವರಿಗೆ ಸಾಮೂಹಿಕ ಕ್ಷೀರಾಭಿಷೇಕ ಹಾಗೂ ಸಂಜೆ ಶಶಿಧರ ಕೋಟೆ ಅವರಿಂದ ಹಾಡುಗಾರಿಕೆ ನಡೆಯಲಿದೆ.

2009ರಲ್ಲಿ ಸಾಯಿಬಾಬಾ ಅವರ ಭಕ್ತರ ಸಹಕಾರದಿಂದ ಮಂದಿರದ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಯಿತು. ಅದಕ್ಕಿಂತ ಮುಂಚಿತವಾಗಿ ಬಾಬರವರ ದರ್ಶನ ಪಡೆಯಲು ಹೊಸಕೋಟೆಯ ಸಾಯಿ ಭಕ್ತರು ಬೇರೆಬೇರೆ ಊರುಗಳಿಗೆ ಹೋಗುತ್ತಿದ್ದರು. ಹೊಸಕೋಟೆಯ ಊರಿನವರಾಗಿ ಈಗ ಬೆಂಗಳೂರು ನಗರದದಲ್ಲಿ ವಾಸವಾಗಿರುವ ಸಾಯಿ ರಮೇಶ್ ಅವರ ಸಂಕಲ್ಪ ಶಕ್ತಿ ಮತ್ತು ಪರಿಶ್ರಮದ ಪಲದಿಂದ ಅವರ ಮನೆಯವರ ಸಹಕಾರದಿಂದ ಪ್ರಾರಂಭವಾದ ದೇವಾಲಯದ ನಿರ್ಮಾಣ ಕಾರ್ಯ ಎಲ್ಲ ಸಾಯಿ ಭಕ್ತರ ಸಹಕಾರದಿಂದ ಯಶಸ್ವಿಯಾಗಿ ನಡೆಯಿತು. ಈಗ ಸಾಯಿಬಾಬಾ ಮಂದಿರ ಹೊಸಕೋಟೆಯ ಒಂದು ಆಕರ್ಷಣೆಯ ಕೇಂದ್ರ.

ADVERTISEMENT

ಪ್ರತಿ ವರ್ಷ ವಿಜಯ ದಶಮಿ, ಗುರು ಪೂರ್ಣಿಮಾ, ದತ್ತಜಯಂತಿ, ಮುಂತಾದ ದಾರ್ಮಿಕ ದಿನಗಳಲ್ಲಿ ವಿವಿಧ ಹೊಮ ಹವನ ಗಳನ್ನು ಮಾಡುವ ಮೂಲಕ ಭಕ್ತರಲ್ಲಿ ಧಾರ್ಮಿಕ ಭಾವನೆಗಳನ್ನು ಜಾಗ್ರುತಗೊಳೆಸುವ ಕಾರ್ಯವನ್ನು ದೇವಾಲಯದ ಆಡಳಿತ ಮಂಡಳಿ ಮಾಡುತ್ತಿದೆ. ಜೊತೆಗೆ ಆವರಣದಲ್ಲಿ ಗಣಪತಿ ಹಾಗು ನರಸಿಂಹ ಸ್ವಾಮಿ ದೇವಾಲಯ ಭಕ್ತರಿಗೆ ಆಕರ್ಷಣೆಯ ಕೇಂದ್ರವಾಗಿದೆ.

ದಿನವೂ ನಾಲ್ಕು ಬಾರಿ ಬಾಬರವರಿಗೆ ಆರತಿ, ಗುರುವಾರ ವಿಶೇಷ ಪೂಜಾಕಾರ್ಯ ನಡೆಯುತ್ತದೆ. ಮುಂದಿನ ದಿನಗಳಲ್ಲಿ ದೇವಾಲಯ ಹಿಂದೆ ತೆಗೆದುಕೊಂಡಿರುವ ನೂತನ ಜಾಗದಲ್ಲಿ ಅನ್ನರ್ಪೂಣೆಶ್ವರಿಯ ದೇವಾಲಯ ನಿರ್ಮಿಸಿ ಬಡಜನರಿಗೆ ದಾಸೋಹ ನಡೆಸುವ ಯೋಜನೆ ಇರುವುದಾಗಿ ಸಾಯಿ ರಮೇಶ್ ರವರು ತಿಳಿಸಿದರು. ಇದಕ್ಕೆ ಸಾಯಿ ಭಕ್ತರ ಸಹಕಾರ ಮುಖ್ಯ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ದೇವಾಲಯ ನಗರದ ಪ್ರಮುಖ ಸ್ಥಳವಾಗುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತ ಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.