ADVERTISEMENT

ದೇವನಹಳ್ಳಿ | ಮಕ್ಕಳ ಸಂಭ್ರಮದಲ್ಲಿ ಸಂಕ್ರಾಂತಿ ಸೊಗಡು

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 6:21 IST
Last Updated 16 ಜನವರಿ 2026, 6:21 IST
ದೇವನಹಳ್ಳಿ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಕ್ಕಳ ಸಂಭ್ರಮದೊಂದಿಗೆ ನಡೆದ ಸಂಕ್ರಾಂತಿ ಸುಗ್ಗಿ ಹಬ್ಬ 
ದೇವನಹಳ್ಳಿ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಕ್ಕಳ ಸಂಭ್ರಮದೊಂದಿಗೆ ನಡೆದ ಸಂಕ್ರಾಂತಿ ಸುಗ್ಗಿ ಹಬ್ಬ    

ದೇವನಹಳ್ಳಿ: ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಹಬ್ಬಗಳ ಅರಿವು ಮೂಡಿಸುವ ಉದ್ದೇಶದಿಂದ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕರ ಸಂಕ್ರಾಂತಿ–ಸುಗ್ಗಿ ಹಬ್ಬ ಸಂಭ್ರಮದಿಂದ ಬುಧವಾರ ಆಚರಿಸಲಾಯಿತು.

ಧಾನ್ಯಗಳ ಪ್ರದರ್ಶನ, ಗೋವು ‌ಪೂಜೆ, ಹಬ್ಬದ ಅಡುಗೆ ಪದಾರ್ಥಗಳ ಪ್ರದರ್ಶನ ‌‌ಮಕ್ಕಳಲ್ಲಿ ವಿಶೇಷ ಉತ್ಸಾಹ ಮೂಡಿಸಿತು. 

ಗ್ರಾಮೀಣ ಸಂಸ್ಕೃತಿ ಆಚರಣೆ ಕಂಡು ಮಕ್ಕಳು ಕುತೂಹಲದಿಂದ ಭಾಗವಹಿಸಿದ್ದರು. 

ADVERTISEMENT

ಶಾಲೆ ಮುಖ್ಯ ಶಿಕ್ಷಕ ಚಂದ್ರಪ್ಪ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ‌ ಹಾಗೂ ಸದಸ್ಯರು, ಶಿಕ್ಷಕರು ಮತ್ತು ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ.ಮಂಜುನಾಥ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.