ADVERTISEMENT

ಕೋಮು ಸೌಹಾರ್ದದ ಪ್ರತಿಪಾದಕ ಶಿವಾಜಿ

ಭಜರಂಗದಳ ಜಿಲ್ಲಾ ಘಟಕದ ಸಂಚಾಲಕ ವಿ.ಕೃಷ್ಣಮೂರ್ತಿ ಅಭಿಮತ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 20:30 IST
Last Updated 20 ಫೆಬ್ರುವರಿ 2020, 20:30 IST
ವಿಜಯಪುರದ ಶಿವಗಣೇಶ ವೃತ್ತದಲ್ಲಿ ಛತ್ರಪತಿ ಶಿವಾಜಿ ಯುವಸೇನೆ ವತಿಯಿಂದ ಆಯೋಜಿಸಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಚಂದ್ರಶೇಖರ್ ಅವರನ್ನು ಯುವಸೇನೆಯ ಪದಾಧಿಕಾರಿಗಳು ಸನ್ಮಾನಿಸಿದರು
ವಿಜಯಪುರದ ಶಿವಗಣೇಶ ವೃತ್ತದಲ್ಲಿ ಛತ್ರಪತಿ ಶಿವಾಜಿ ಯುವಸೇನೆ ವತಿಯಿಂದ ಆಯೋಜಿಸಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಚಂದ್ರಶೇಖರ್ ಅವರನ್ನು ಯುವಸೇನೆಯ ಪದಾಧಿಕಾರಿಗಳು ಸನ್ಮಾನಿಸಿದರು   

ವಿಜಯಪುರ: ‘ಜಾತಿ, ಭಾಷೆಯ ಭೇದ ಎಣಿಸದೆ ಮಹಿಳೆಯರಲ್ಲಿ ತಾಯಿಯನ್ನು ಕಾಣುತ್ತಿದ್ದ ರಾಷ್ಟ್ರ ರಕ್ಷಕ, ಕೋಮು ಸೌಹಾರ್ದದ ಪ್ರತಿಪಾದಕರಾಗಿದ್ದ ಶಿವಾಜಿ ಮಹಾರಾಜರ ಜೀವನ ತತ್ವಾದರ್ಶಗಳನ್ನು ಇಂದಿನ ಯುವಜನರು ಅಳವಡಿಸಿಕೊಂಡು ರಾಜ್ಯವನ್ನು ಅಭಿವೃದ್ಧಿ ಕಡೆಗೆ ಕೊಂಡೊಯ್ಯಬೇಕು’ ಎಂದು ಭಜರಂಗದಳ ಜಿಲ್ಲಾ ಘಟಕದ ಸಂಚಾಲಕ ವಿ.ಕೃಷ್ಣಮೂರ್ತಿ ಹೇಳಿದರು.

ಇಲ್ಲಿನ ಶಿವಗಣೇಶ ವೃತ್ತದಲ್ಲಿ ಛತ್ರಪತಿ ಶಿವಾಜಿ ಯುವಸೇನೆ ವತಿಯಿಂದ ಆಯೋಜಿಸಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಛತ್ರಪತಿ ಶಿವಾಜಿ ರಾಷ್ಟ್ರಕ್ಕೆ ಆಡಳಿತ ವೈಖರಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಮರಾಠ ವಂಶದಲ್ಲಿ ಹುಟಿದ್ದರೂ ದೇಶಕ್ಕೆ ಅವರ ಚರಿತ್ರೆ ಅವಶ್ಯಕ. ಶಿವಾಜಿ ಆಡಳಿತದಲ್ಲಿ ಬುಡಕಟ್ಟು ಜನಾಂಗದವರಿಗೆ, ಮಹಿಳೆಯರಿಗೆ ಉತ್ತಮ ಸ್ಥಾನ ಕಲ್ಪಿಸಿಕೊಡಲಾಗಿತ್ತು. ಭೂ ಕಂದಾಯ ಪದ್ಧತಿ, ಸೈನ್ಯ, ಧಾರ್ಮಿಕ ಕೇಂದ್ರಗಳ ಸುಧಾರಣೆ ಜತೆಗೆ ಕನ್ನಡ ಹಾಗೂ ಮರಾಠಿ ಭಾಷಿಕರ ನಡುವೆ ಸಾಂಸ್ಕೃತಿಕ ಸಾಮರಸ್ಯಕ್ಕೆ ಆದ್ಯತೆ ನೀಡಲಾಗಿತ್ತು. ದೇಶದ ಪ್ರಗತಿಗೆ ಅವರಲ್ಲಿದ್ದ ಸಹೋದರತ್ವ ಭಾವನೆ ಗುಣ ಬೆಳೆಸಿಕೊಳ್ಳುವುದು ಪ್ರಸ್ತುತ ಸಂದರ್ಭದಲ್ಲಿ ಅತ್ಯಗತ್ಯ’ ಎಂದು ತಿಳಿಸಿದರು.

ADVERTISEMENT

ಬಿಜೆಪಿ ನಗರ ಉಸ್ತುವಾರಿ ಕನಕರಾಜು ಮಾತನಾಡಿ, ‘ಶಿವಾಜಿ ಯಾವುದೇ ಭಾಷೆ, ಜಾತಿ ಅಥವಾ ಪ್ರದೇಶಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಅವರನ್ನು ಸಾಹಿತ್ಯ, ಇತಿಹಾಸದ ಮೂಲಕ ತಿಳಿದುಕೊಳ್ಳಬೇಕಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರದ ಜನರಲ್ಲಿ ಸಾಮಾಜಿಕ, ಸಾಂಸ್ಕೃತಿಕ ಬಾಂಧವ್ಯ ಉತ್ತಮವಾಗಿರಲು ಕಾರಣ ಶಿವಾಜಿ ಮಹಾರಾಜರು. ಅವರು ದೇಶ ಪ್ರೇಮ ಎಲ್ಲೆಡೆ ಪಸರಿಸುವ ಜತೆಗೆ ಸಮಾಜದಲ್ಲಿ ಸಮಾನತೆ ಕಲ್ಪಿಸಿಕೊಟ್ಟಿದ್ದರು’ ಎಂದರು.

ಛತ್ರಪತಿ ಶಿವಾಜಿ ಯುವಸೇನೆ ಮುಖ್ಯಸ್ಥ ಮಣಿ ಮಾತನಾಡಿ, ‘ಶಿವಾಜಿ ಹೆಚ್ಚಾಗಿ ಹೆಣ್ಣು ಮಕ್ಕಳಿಗೆ ಸಮಾನ ಹಕ್ಕು ಕಲ್ಪಿಸಲು ಮುಂದಾಗಿದ್ದರು. ಎಲ್ಲ ವರ್ಗದ ಜನರು ಸ್ವತಂತ್ರವಾಗಿ ಸ್ವಾವಲಂಬಿ ಜೀವನ ನಡೆಸುವ ಅವಕಾಶ ನೀಡಿದ್ದರು. ಎಲ್ಲ ಧರ್ಮದವರನ್ನು ಸಮನಾಗಿ ಕಾಣುವಂತವರಾಗಿದ್ದರು. ಯುವಜನರು ಶಿವಾಜಿ ಅವರ ಜೀವನ ಆದರ್ಶಗಳನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು’ ಎಂದರು.

ವಿಶ್ವ ವಿಜೇತ ಸ್ವಾಮಿವಿವೇಕಾನಂದ ಬಳಗದ ಮುಖ್ಯಸ್ಥ ಲಕ್ಷ್ಮಣ್ ಶಿವಾಜಿ ಮಹಾರಾಜರ ಬಗ್ಗೆ ಉಪನ್ಯಾಸ ನೀಡಿದರು.

ನಿವೃತ್ತ ಯೋಧ ಚಂದ್ರಶೇಖರ್, ವರ್ಣ ಬೆನಕ ಸ್ಟುಡಿಯೊ ಮಾಲೀಕ ಮಂಜುನಾಥ್, ಜೈ ಹಿಂದ್ ಯೋಧ ಬಳಗದ ಮುಖ್ಯಸ್ಥರಾದ ಲೋಕೇಶ್, ಚಂದ್ರಶೇಖರ್, ಭಜರಂಗದಳ ನಗರ ಘಟಕದ ಸಂಚಾಲಕ ಬೆಳ್ಳಿ ಮಹೇಶ್ ಬಾಬು, ಹಾಗೂ ಗೋಪಾಲಕೃಷ್ಣ, ಅಕ್ಷಯ್, ತಾಲ್ಲೂಕು ಬಿಜೆಪಿ ಮುಖಂಡ ನಾಗರಾಜಗೌಡ, ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.