ದಾಬಸ್‌ಪೇಟೆ: ಅಪ್ಪ ಡಾಬಾದಲ್ಲಿ ಸಪ್ಲೆಯರ್, ಅಮ್ಮ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಿ, ಮಗಳೀಗ ಎಸ್ಸೆಸ್ಸೆಲ್ಸಿ ಯಲ್ಲಿ 606 ಅಂಕ ಪಡೆದ ಸಾಧಕಿ.
8ನೇ ತರಗತಿ ತನಕ ಸರ್ಕಾರಿ ಶಾಲೆಯಲ್ಲಿ ಓದಿದ ಅಂಚೇಪಾಳ್ಯ ಗ್ರಾಮದ ಪ್ರಿಯಾಂಕಾ, 9 ಮತ್ತು 10ನೇ ತರಗತಿಯನ್ನು ಸಿದ್ದಗಂಗಾ ಸಂಸ್ಥೆಯ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆ ಕಲಿತಳು.
‘ಟ್ಯೂಷನ್‌ಗೆ ಹೋಗದೆ ಶಾಲೆಯಲ್ಲಿ ಕಲಿಸಿದ್ದನ್ನು ಶ್ರದ್ಧೆಯಿಂದ ಕಲಿತೆ. ಅಂದಿನ ಪಾಠಅಂದೇ ಓದಿದ್ದರಿಂದ ಸಾಧನೆ ಸುಲಭವಾಯಿತು’ ಎಂದು ಪ್ರಿಯಾಂಕ ಹೇಳಿದರು.
ಚಿಲ್ಲರೆ ಅಂಗಡಿ ನಡೆಸುವ ಹೆತ್ತವರ ಬಡತನ ಕಂಡು ಛಲದೊಂದಿಗೆ ಕಲಿತ ವಿವೇಕಾನಂದ ಶಾಲೆಯ ಡಿ.ಎಂ. ಸಂಜನಾ, 600 ಅಂಕ ಗಳಿಸಿದ್ದಾರೆ.
ಅನನ್ಯಾ ಪ್ರಥಮ
ನೆಲಮಂಗಲ: ಪಟ್ಟಣದ ಸದಾಶಿವನಗರದ ನಿವಾಸಿ ಉಪನ್ಯಾಸಕ ಕೆಂಪೇಗೌಡ ಅವರ ಪುತ್ರಿ, ಬಿ.ಪಿ.ಇಂಡಿಯನ್ ಶಾಲೆ ವಿದ್ಯಾರ್ಥಿನಿ ಕೆ.ಅನನ್ಯಾ ಎಸ್ಸೆಸ್ಸೆಲ್ಸಿಯಲ್ಲಿ 618 ಅಂಕ ಗಳಿಸುವ ಮೂಲಕ ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಎಬಿನೇಜರ್ ಶಾಲೆಯ ವಿ.ಎಸ್.ದೀಪಕ್ 617 ದ್ವಿತೀಯ, ಬಸವೇಶ್ವರ ಆಂಗ್ಲ ಶಾಲೆಯ ನಿಷಾದ್ ಬಾಬು ಸೂಲಿಕೇರಿ 616 ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.