
ಹೊಸಕೋಟೆ: ಮಳೆಯಿಂದ ತೇವಗೊಂಡಿದ್ದ ಕ್ರೀಡಾ ಮೈದಾನ, ಕ್ರೀಡೆಗಳಿಗೆ ತಕ್ಕಂತೆ ಸಿದ್ಧವಾಗದ ಕೋರ್ಟ್... ಹೀಗೆ ಹಲವು ಕೊರತೆಗಳ ನಡುವೆಯೂ ಕ್ರೀಡಾಪುಟಗಳ ಉತ್ಸಾಹ ಕುಂದಿರಲಿಲ್ಲ. ನಮ್ಮ ಗುರಿ ಆಟದಲ್ಲಿ ಜಯ ಸಾಧಿಸುವುದು ಎನ್ನುವ ಸಂದೇಶ ನೀಡಿದ ವಿದ್ಯಾರ್ಥಿಗಳು ಅವ್ಯವಸ್ಥೆಗಳನ್ನು ಮೆಟ್ಟಿನಿಂತು ಕ್ರೀಡಾ ಉತ್ಸಾಹ ತೋರಿದರು.
ಹಲವರು ಉತ್ತಮ ಪ್ರದರ್ಶನ ನೀಡಿ ಗೆದ್ದು ಬೀಗಿದವರು ರಾಜ್ಯಮಟ್ಟಕ್ಕೆ ಆಯ್ಕೆಯಾದರೆ, ಸೋತವರು ಇದೆ ಕೊನೆಯಲ್ಲ. ಸೋಲೇ ಗೆಲುವಿನ ಮೆಟ್ಟಿಲು. ಮುಂದಿನ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಬೇಕೆಂಬ ಛಲತೊಟ್ಟರು.
– ಈ ದೃಶ್ಯಗಳು ಕಂಡು ಬಂದಿದ್ದು, ಶಾಲಾ ಶಿಕ್ಷಣ ಶಿಕ್ಷಣ ಇಲಾಖೆ(ಪದವಿ ಪೂರ್ವ) ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ.
ಶುಕ್ರವಾರ ಆರಂಭಗೊಂಡ ಕ್ರೀಡಾಕೂಟದಲ್ಲಿ ದೇವನಹಳ್ಳಿ, ನೆಲಮಂಗಲ, ದೊಡ್ಡಬಳ್ಳಾಪುರ, ಹೊಸಕೋಟೆ ತಾಲ್ಲೂಕುಗಳ ಎಲ್ಲಾ ಪದವಿಪೂರ್ವ ಕಾಲೇಜುಗಳ ನೂರಾರು ಉದಯೋನ್ಮುಖ ಕ್ರೀಡಾಪಟುಗಳು ಭಾಗಹಿಸಿದ್ದಾರೆ.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮೋಹನ್ ಕುಮಾರ್ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಕ್ರೀಡಾ ಸಂಘದ ಜಿಲ್ಲಾ ಅಧ್ಯಕ್ಷ ರಾಜುಪಾಲ, ಸತೀಶ್ ಕುಮಾರ್, ಕಾರ್ಯದರ್ಶಿ ಬೈರೆಡ್ಡಿ, ಪರೀಕ್ಷಾ ಕಾರ್ಯದರ್ಶಿ ರಾಮನಾಥ್, ಸದಸ್ಯರಾದ ಸುರೇಶ್, ಪ್ರಾಂಶುಪಾಲರಾದ ಮೋಹನ್ ಕುಮಾರ್, ಬಾಬುರೆಡ್ಡಿ, ಶ್ರೀನಾಥ್, ವೆಂಕಟರಾಜು, ಕೃಷ್ಣಪ್ಪ ಭಾಗವಹಿಸಿದ್ದರು.
ವಿಜೇತರು(ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ)
ಡಿಸ್ಕಸ್ ಥ್ರೋ 19 ವರ್ಷದೊಳಗಿನ ಬಾಲಕರ ವಿಭಾಗ: ನೆಲಮಂಗಲದ ಅರ್ಜುನ್, ಹೊಸಕೋಟೆಯ ಮನೀಷ್ ನಾಯ್ಡು, ನೆಲಮಂಗಲ ಮೋಹನ್ ಕುಮಾರ್.
ಜಾವೆಲಿನ್ 19 ವರ್ಷದೊಳಗಿನ ಬಾಲಕರ ವಿಭಾಗ: ನೆಲಮಂಗಲದ ಜ್ಞಾನ ಧಾರಾ ಪಿಯು ಕಾಲೇಜಿನ ಜೀವನ್, ಹೊಸಕೋಟೆಯ ಕೆಎಸ್‌ವಿಕೆ ಕಾಲೇಜಿನ ಅಲ್ಪೆಜ್ ಖಾನ್, ದೇವನಹಳ್ಳಿಯ ಹೇಮಂತ್.
ಹ್ಯಾಮರ್ ಎಸೆತ 19 ವರ್ಷದೊಳಗಿನ ಬಾಲಕರ ವಿಭಾಗ: ದೊಡ್ಡಬಳ್ಳಾಪುರದ ಶ್ರೀ ವಾಣಿ ಪಿಯು ಕಾಲೇಜಿನ ರಾಕೇಶ್, ದೇವನಹಳ್ಳಿಯ ಎಂವಿಎಂಪಿಯು ಕಾಲೇಜಿನ ಕಿಶನ್, ಹೊಸಕೋಟೆಯ ಕೃಠ್ ಪಿಯು ಕಾಲೇಜಿನ ಅಜಯ್ ಆರ್.
ಉದ್ದ ಜಿಗಿತ 19 ವರ್ಷದೊಳಗಿನ ಬಾಲಕರ ವಿಭಾಗ: ಹೊಸಕೋಟೆಯ ಕೆಎಸ್‌ವಿಕೆಪಿಯು ಕಾಲೇಜಿನ ವೆಂಕಟ್ ವೈದ್ಯನಾಥ್, ದೊಡ್ಡಬಳ್ಳಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮಹೇಶ್, ನೆಲಮಂಗಲದ ಚರಣ್.
ಉದ್ದ ಜಿಗಿತ 19 ವರ್ಷದೊಳಗಿನ ಬಾಲಕಿಯರ ವಿಭಾಗ: ದೇವನಹಳ್ಳಿ ನಳಂದ ಪಿಯು ಕಾಲೇಜಿನ ಭುವನ ಎಂ, ದೊಡ್ಡಬಳ್ಳಾಪುರದ ಎಸ್ ಡಿ ಪಿ ಪಿಯು ಕಾಲೇಜಿನ ನೀತು ಟಿ, ಹೊಸಕೋಟೆಯ ಸ್ಪೂರ್ತಿ.
1500 ಮೀ. ಓಟದ 19 ವರ್ಷದೊಳಗಿನ ಬಾಲಕರ ವಿಭಾಗ: ಹೊಸಕೋಟೆಯ ಕೆಎಸ್‌ವಿಕೆ ಪಿಯು ಕಾಲೇಜಿನ ಧೀರಜ್, ದೊಡ್ಡಬಳ್ಳಾಪುರದ ಎಸ್ ಡಿ ಯು ಪಿಯು ಕಾಲೇಜಿನ ಗೌತಮ್, ಜಡಿಗೆನಹಳ್ಳಿಯ ಎಂ ಡಿ ಆರ್ ಪಿಯು ಕಾಲೇಜಿನ ರಾಹುಲ್.
1,500 ಮೀ. ಓಟದ 19 ವರ್ಷದೊಳಗಿನ ಬಾಲಕಿಯರ ವಿಭಾಗ: ಹೊಸಕೋಟೆಯ ಕೆಎಸ್‌ವಿಕೆ ಪಿಯು ಕಾಲೇಜಿನ ನಮಿತ, ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಪಿಯು ಕಾಲೇಜಿನ ಶಿರೀಷ, ದೊಡ್ಡಬಳ್ಳಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಗಂಗೋತ್ರಿ.
100 ಮೀ. ಓಟದ 19 ವರ್ಷದೊಳಗಿನ ಬಾಲಕರ ವಿಭಾಗ: ದೊಡ್ಡಬಳ್ಳಾಪುರದ ಶ್ರೀವಾಣಿ ಪಿಯು ಕಾಲೇಜಿನ ಲಿಖಿತ್ ಗೌಡ, ನೆಲಮಂಗಲದ ಯೋಯ್ಸಳ ಪಿಯು ಕಾಲೇಜಿನ ಚೇತನ್ ಕುಮಾರ್, ದೊಡ್ಡಬಳ್ಳಾಪುರದ ಎಸ್‌ಡಿಯು ಪಿಯು ಕಾಲೇಜಿನ ಧೀರಜ್ ಕುಮಾರ್.
100 ಮೀ. ಓಟದ 19 ವರ್ಷದೊಳಗಿನ ಬಾಲಕಿಯರ ವಿಭಾಗ: ದೇವನಹಳ್ಳಿ ನಳಂದ ಪಿಯು ಕಾಲೇಜಿನ ಭುವನ, ದೊಡ್ಡಬಳ್ಳಾಪುರದ ಶ್ರೀವಾಣಿ ಪಿಯು ಕಾಲೇಜಿನ ಲೇಖನ, ದೇವನಹಳ್ಳಿಯ ಅನಂತ ಪಿಯು ಕಾಲೇಜಿನ ಅಕ್ಷಿತ.
200 ಮೀ. ಓಟದ 19 ವರ್ಷದೊಳಗಿನ ಬಾಲಕರ ವಿಭಾಗ: ದೊಡ್ಡಬಳ್ಳಾಪುರದ ಶ್ರೀವಾಣಿ ಪಿಯು ಕಾಲೇಜಿನ ಚರಣ್ ಜಿ.ಎನ್, ದೊಡ್ಡಬಳ್ಳಾಪುರದ ಎಸ್‌ಡಿಯು ಪಿಯು ಕಾಲೇಜಿನ ನಿತಿನ್ ಗೌಡ, ನೆಲಮಂಗಲದ ಎಸ್ ಬಿ ಪಿಯು ಕಾಲೇಜಿನ ಕಾರ್ತಿಕ್ ಕುಮಾರ್.
200 ಮೀ. ಓಟದ 19 ವರ್ಷದೊಳಗಿನ ಬಾಲಕಿಯರ ವಿಭಾಗ: ನೆಲಮಂಗಲದ ಶಿವಗಂಗಾ ಪಿಯು ಕಾಲೇಜಿನ ಧನಲಕ್ಷ್ಮಿ, ಹೊಸಕೋಟೆಯ ಮಾರುತಿ ಪಿಯು ಕಾಲೇಜಿನ ಕಲ್ಪಿತ, ಹೊಸಕೋಟೆಯ ಸಮೃದ್ದಿ ಪಿಯು ಕಾಲೇಜಿನ ತೇಜಸ್ವಿನಿ.
ಗುಂಡು ಎಸೆತ 19 ವರ್ಷದೊಳಗಿನ ಬಾಲಕರ ವಿಭಾಗ: ಯಂಟಗಾನಹಳ್ಳಿಯಾ ಸರ್ಕಾರಿ ಪದವಿ ಪೂರ್ವ ಕಾಲೇಜು ಅರ್ಜುನ್, ಹೊಸಕೋಟೆಯ ಕೃಠ್ ಪಿಯು ಕಾಲೇಜಿನ ಅಜಯ್, ದೊಡ್ಡಬಳ್ಳಾಪುರದ ಶ್ರೀವಾಣಿ ಪಿಯು ಕಾಲೇಜಿನ ವಿಶಾಲ್ ಗೌಡ.
ಗುಂಡು ಎಸೆತ 19 ವರ್ಷದೊಳಗಿನ ಬಾಲಕಿಯರ ವಿಭಾಗ: ದೇವನಹಳ್ಳಿಯ ಎಂವಿಎಂ ಪಿಯು ಕಾಲೇಜಿನ ಹೂಸ್ನ, ದೊಡ್ಡಬಳ್ಳಾಪುರದ ಎಚ್ ಎಂಎಸ್‌ಕೆ ಪಿಯು ಕಾಲೇಜಿನ ಲೇಖನ, ಹೊಸಕೋಟೆಯ ಮಹಾದೇವ ಕಾಲೇಜಿನ ಕಾವ್ಯ.
400 ಮೀ. ಓಟ 19 ವರ್ಷದೊಳಗಿನ ಬಾಲಕರ ವಿಭಾಗ: ದೊಡ್ಡಬಳ್ಳಾಪುರದ ಎಸ್‌ಡಿಯು ಪಿಯು ಕಾಲೇಜಿನ ನಿತಿನ್ ಗೌಡ, ದೊಡ್ಡಬಳ್ಳಾಪುರದ ಎಸ್ ಡಿ ಯು ಪಿಯು ಕಾಲೇಜಿನ ಧೀರಜ್ ಕುಮಾರ್, ದೇವನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಿಶನ್.
400 ಮೀ. ಓಟ 19 ವರ್ಷದೊಳಗಿನ ಬಾಲಕಿಯರ ವಿಭಾಗ: ದೊಡ್ಡಬಳ್ಳಾಪುರದ ಎಸ್‌ಡಿಯು ಪಿಯು ಕಾಲೇಜಿನ ದಿವ್ಯ, ದೇವನಹಳ್ಳಿ ನಳಂದ ಪಿಯು ಕಾಲೇಜಿನ ಧನ್ಯಶ್ರೀ, ಹೊಸಕೋಟೆಯ ಕೆ ಎಸ್ ವಿ ಕೆ ಪಿಯು ಕಾಲೇಜಿನ ಶೃಷ್ಟಿಕ ಎಸ್ ಜಿ.
ಪುಟ್ಬಾಲ್ 19 ವರ್ಷದೊಳಗಿನ ಬಾಲಕಿಯರ ವಿಭಾಗ: ಎಸ್ ಎಸ್ ಪಿ ಯು ಕಾಲೇಜು ನೆಲಮಂಗಲ.
ಕ್ರೀಡಾಂಗಣದಲ್ಲಿ ನೆಲ ಹಾಸಿಗೆ ಅಸಮಾರ್ಪಕವಾಗಿರುವ ಕಾರಣಕ್ಕೆ ಸಿಂಥೆಟಿಕ್ ಟ್ರಾಕ್ ಹಾಕಿ ಕೊಡಿ ಎಂದು ಪ್ರತಿ ಬಾರಿಯೂ ಕ್ರೀಡಾಕೂಟ ಆಯೋಜಿಸುವ ಕೇಳುತ್ತೇವೆ. ಇದುವರೆಗೆ ಸ್ಪಂದನೆ ದೊರೆತಿಲ್ಲ.ಮನೀಷ್ ನಾಯ್ಡು ವಿದ್ಯಾರ್ಥಿ
ಹ್ಯಾಂಡ್ ಬಾಲ್ ಆಟವನ್ನು ಹೀಗೂ ಆಡಿಸಬಹುದಾ ಎಂಬುದನ್ನು ಇಲ್ಲೇ ಮೊದಲ ಬಾರಿಗೆ ನೋಡಿದೆ. ನೆಟ್‌ಇಲ್ಲದೆ ಎಲ್ಲೋ ಬಿದ್ದಿರುವ ಪೋಲ್ ಅನ್ನು ತಂದಿಟ್ಟು ಆಟ ಅಡಿಸುತ್ತಾರೆ. ಇದಕ್ಕೆ ಏನು ಹೇಳಬೇಕೊ ತಿಳಿಯುತ್ತಿಲ್ಲ.ಚರಣ್ ವಿದ್ಯಾರ್ಥಿ
ಕ್ರೀಡಾಕೂಟಕ್ಕೆ ಸಿದ್ಧವಾಗದ ಮೈದಾನ: ಆಕ್ರೋಶ
ಕಳೆದ ಒಂದು ವಾರದಿಂದ ಜಿಟಿಜಿಟಿ ಮಳೆಯಿಂದ ಕ್ರೀಡಾಂಗಣದಲ್ಲಿ ತೇವ ಇದ್ದರೂ ಕ್ರೀಡಾಂಗಣವನ್ನು ಸಿದ್ಧಗೊಳಿಸದೆ ಕ್ರೀಡಾಕೂಟ ಆಯೋಜಿಸಲಾಗಿದೆ. ಅಸಮರ್ಪಕ ನೆಲೆ ಹಾಸಿಗೆ(ಟ್ರಾಕ್)ಯಲ್ಲಿ ಓಡುವಾಗ(ರನ್ನಿಂಗ್) ಕೊಕ್ಕೊ ಕಬ್ಬಡ್ಡಿ ಪುಟ್ಬಾಲ್ ಹ್ಯಾಂಡ್ ಬಾಲ್ ಇತರೆ ಕ್ರೀಡೆಗಳಿಗೆ ತಕ್ಕಂತೆ ಮೈದಾನ ಸಿದ್ಧಗೊಳಿಸದೆ ಕ್ರೀಡೆ ಆಯೋಜಿಸಲಾಗಿದೆ ಎಂದು ಕ್ರೀಡಾಪಟುಗಳು ಮತ್ತು ಪೋಷಕರು ಆರೋಪಿಸಿದರು. ನೂರಾರು ವಿದ್ಯಾರ್ಥಿಗಳು ಭಾಗವಹಿಸಿರುವ ಕ್ರೀಡಾಕೂಟಕ್ಕೆ ಶೌಚಾಲಯ ವ್ಯವಸ್ಥೆಯೂ ಸರಿಯಿಲ್ಲ. ಇರುವ ಒಂದೇ ಶೌಚಾಲಯವು ಸ್ವಚ್ಚವಾಗಿಲ್ಲ. ಒದ್ದೆ ಮಣ್ಣಿನಲ್ಲಿ ಆಟ ಆಡೋದು ಹೇಗೆ? ಕನಸು ಕಟ್ಟಿಕೊಂಡು ಕ್ರೀಡೆಗಳಲ್ಲಿ ಭಾಗವಹಿಸಲು ಊರು ಬಿಟ್ಟು ಊರಿಗೆ ಬರುತ್ತೇವೆ. ಕಾಟಾಚಾರಕ್ಕೆ ಹೀಗೆ ಕ್ರೀಡೆ ಆಯೋಜಿಸಿದರೆ ಇರುವ ಆಸಕ್ತಿಯೂ ಕಡಿಮೆಯಾಗುತ್ತದೆ. ಒದ್ದೆಯಾದ ಮಣ್ಣಿನಲ್ಲಿ ಹೇಗೆ ಆಟಆಡೋದು? ಕ್ರೀಡಾಂಗಣದಲ್ಲಿ ಎಲ್ಲಿ ನೋಡಿದರೂ ಸಣ್ಣ ನುಣುಪಾದ ಕಲ್ಲಿನ ಪುಡಿ ಹರಡಿಕೊಂಡಿದೆ ಏನಾದರೂ ಬಿದ್ದರೆ ಚರ್ಮ ಕಿತ್ತುಕೊಂಡು ಬರುತ್ತೆ ಅರ್ಜುನ್ ಕ್ರೀಡಾಪಟು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.