ದೇವನಹಳ್ಳಿ: ರಾಮಾಯಣದಂತಹ ಮಹಾನ್ ಗ್ರಂಥವನ್ನು ರಚಿಸಿದ ಮಹರ್ಷಿ ವಾಲ್ಮೀಕಿ ದೇಶ ಕಂಡ ಅಪರೂಪದ ಸಾಹಿತಿ ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತೋತ್ಸವದಲ್ಲಿ ಮಾತನಾಡಿದರು.
ಮಹರ್ಷಿ ವಾಲ್ಮೀಕಿ ಅವರು ತಮ್ಮ ಪವಿತ್ರ ಸಾಹಿತ್ಯದ ಮೂಲಕ ಬೋಧಿಸಿರುವ ಮಾನವೀಯ ಮೌಲ್ಯ ಪ್ರತಿಯೊಬ್ಬರು ಅನುಸರಿಸಬೇಕು. ಅವರ ಆದರ್ಶ ಸಮಾಜದ ಎಲ್ಲ ಹಂತದಲ್ಲಿ ಹರಡುವ ಮೂಲಕ ಮುಂದಿನ ಪೀಳಿಗೆಗೆ ಅವರ ಸಂದೇಶ ತಲುಪಿಸುವ ಕಾರ್ಯ ಮಾಡಬೇಕು ಎಂದರು.
ಜೆಡಿಎಸ್ ಎಸ್ಟಿ ಘಟಕದ ಅಧ್ಯಕ್ಷ ಮಾಳಿಗೇನಹಳ್ಳಿ ವೆಂಕಟೇಶ ಮೂರ್ತಿ, ಆದರ್ಶ ಪುರುಷ ಶ್ರೀರಾಮನ ಕುರಿತು 24,000 ಕಾವ್ಯಗಳನ್ನು ಮಹರ್ಷಿ ವಾಲ್ಮೀಕಿ ರಚಿಸಿದ್ದು ಅಸಾಧಾರಣ ಸಾಧನೆಯಾಗಿದೆ. ರಾಮಾಯಣದ ಸುಂದರಕಾಂಡ ಪಠಣ ಲೋಕ ಕಲ್ಯಾಣಕ್ಕೆ ಸಹಾಯಕ ಎಂದರು.
ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮುದಾಯದ ಹಿರಿಯ ಸದಸ್ಯರನ್ನು ಸತ್ಕರಿಸಲಾಯಿತು. ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಮುನೇಗೌಡ, ಪುರಸಭೆ ಉಪಾಧ್ಯಕ್ಷ ಜಿ.ಎ.ರವೀಂದ್ರ, ಮುಖಂಡರಾದ ರಾಮಣ್ಣ, ಬಿದಲೂರು ಮುನಿರಾಜು, ನಾರಾಯಣಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.