ADVERTISEMENT

ಆನೇಕಲ್: ನಗರೀಕರಣದಿಂದ ಕಾಡು ಕಣ್ಮರೆ

ಗಾಂಧಿ ಜಯಂತಿ ಅಂಗವಾಗಿ ಸಸಿ ನೆಟ್ಟ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 3:52 IST
Last Updated 4 ಅಕ್ಟೋಬರ್ 2021, 3:52 IST
ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರದ ಏಮ್ಸ್ ಐಬಿಎಸ್ ಕಾಲೇಜಿನಲ್ಲಿ ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಚಾರ್ಯ ಡಾ.ವೆಂಕಟೇಶ್.ಎ.ಅರಕೇರಿ ಚಾಲನೆ ನೀಡಿದರು
ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರದ ಏಮ್ಸ್ ಐಬಿಎಸ್ ಕಾಲೇಜಿನಲ್ಲಿ ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಚಾರ್ಯ ಡಾ.ವೆಂಕಟೇಶ್.ಎ.ಅರಕೇರಿ ಚಾಲನೆ ನೀಡಿದರು   

ಆನೇಕಲ್: ನಗರೀಕರಣದ ಪ್ರಭಾವದಿಂದಾಗಿ ಕಾಂಕ್ರೀಟ್‌ ಕಾಡುಗಳು ಬೆಳೆಯುತ್ತಿದ್ದು, ಹಸಿರು ಕಾಡುಗಳು ಕಣ್ಮರೆಯಾಗುತ್ತಿವೆ. ಭವಿಷ್ಯದದೃಷ್ಟಿಯಿಂದ ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳು ನಡೆಯಬೇಕು ಎಂದು ಬೊಮ್ಮಸಂದ್ರ ಏಮ್ಸ್‌ ಐಬಿಎಸ್‌ ಕಾಲೇಜಿನ ಪ್ರಾಚಾರ್ಯ ಡಾ.ವೆಂಕಟೇಶ್‌.ಎ.ಅರಕೇರಿ ತಿಳಿಸಿದರು.

ಅವರು ತಾಲ್ಲೂಕಿನ ಬೊಮ್ಮಸಂದ್ರದ ಏಮ್ಸ್‌ ಐಬಿಎಸ್‌ ಕಾಲೇಜಿನಲ್ಲಿ ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರು ಕೊಡುಗೆ ನೀಡುವ ಮೂಲಕ ಇರುವ ಒಂದು ಭೂಮಿಯನ್ನು ಜತನದಿಂದ ಕಾಪಾಡಿಕೊಳ್ಳಬೇಕು. ಪರಿಸರವನ್ನು ರಕ್ಷಿಸುವಜವಾಬ್ದಾರಿಯಿದ್ದರೂ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ನಾಶಮಾಡುತ್ತಿದ್ದಾನೆ. ಇದರ ಪ್ರತಿಫಲವನ್ನು ಮನುಷ್ಯನೇ ಅನುಭವಿಸುತ್ತಾನೆ. ಕೊರೊನಾದಂತ ಸಂದರ್ಭಗಳಲ್ಲಿ ಹಣ ನೀಡಿ ಆಮ್ಲಜನಕ ಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ನೀರು, ಆಮ್ಲಜನಕ ಸೇರಿದಂತೆ ಹಲವಾರು ನೈಸರ್ಗಿಕ ವಸ್ತುಗಳನ್ನು ಖರೀದಿಸಬೇಕಾದದುಃಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಪರಿಸರ ಸಂರಕ್ಷಣೆ ನಮ್ಮೆಲ್ಲರಜವಾಬ್ದಾರಿ’ ಎಂದರು.

ADVERTISEMENT

ಪರಿಸರ ಸಂರಕ್ಷಣೆ, ಸ್ವಚ್ಛತೆ ಗಾಂಧೀಜಿ ಮತ್ತು ಲಾಲ್‌ಬಹದ್ದೂರ್‌ ಶಾಸ್ತ್ರೀ ಅವರ ಜನ್ಮದಿನಾಚರಣೆ ಅಂಗವಾಗಿ ನೆಡಲಾಗಿರುವ ಗಿಡಗಳನ್ನು ವಿದ್ಯಾರ್ಥಿಗಳಿಗೆ ದತ್ತು ನೀಡಲಾಗಿದೆ. ಇವುಗಳನ್ನು ಬೆಳೆಸುವುದು ಪ್ರತಿಯೊಬ್ಬ ವಿದ್ಯಾರ್ಥಿಯಜವಾಬ್ದಾರಿ
ಎಂದರು.

ಕಾಲೇಜಿನ ಆನಿ ಗ್ಲೋರಿಯಾ ಜೆ.ದಾಸ್‌ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪರಿಸರ ಕಾಳಜಿ ಕಡಿಮೆಯಾಗುತ್ತಿದ್ದು ಯುವಕರು ಪರಿಸರವನ್ನು ಕಾಪಾಡಲು ಶ್ರಮಿಸಬೇಕು. ಈ ನಿಟ್ಟಿನಲ್ಲಿ ತಾಲ್ಲೂಕಿನ ಬೊಮ್ಮಸಂದ್ರ ಕೈಗಾರಿಕ ಪ್ರದೇಶದ ಕಾರ್ಖಾನೆಗಳಿಗೆ ಗಿಡಗಳನ್ನು ನೀಡಲಾಗಿದ್ದು ಕಾರ್ಖಾನೆಗಳಲ್ಲಿ ಪರಿಸರ ಸ್ನೇಹಿ ವಾತಾವರಣ ನಿರ್ಮಿಸಲು ಸಾಧ್ಯ ಎಂದರು.

ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕಿ ಪ್ರೊ.ಅಂಬಿಕಾ ವೆಂಕಟೇಶ್‌, ಡಾ.ಚಂದ್ರಶೇಖರ್‌, ರೇಖಾ, ಸತೀಶ್, ಸೌಮ್ಯ, ಹೇಮಂತ್‌ಕುಮಾರ್, ರಮ್ಯ, ಡಾ.ರವಿಚಂದ್ರರೆಡ್ಡಿ, ಪ್ರೊ.ರೋಹಿತ್‌, ಪೃಥ್ವಿ, ಕಾವೇರಿ ಸ್ಯಾಮ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.