ADVERTISEMENT

ಹೊಸಕೋಟೆ-ಜಂಗಮಕೋಟೆ ಹೆದ್ದಾರಿಯಲ್ಲಿ ಕಸದ ರಾಶಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 13:04 IST
Last Updated 3 ಅಕ್ಟೋಬರ್ 2019, 13:04 IST
ಹೊಸಕೋಟೆ-ಜಂಗಮಕೋಟೆ ಹೆದ್ದಾರಿಯ ಇ. ಮುತ್ಸಂದ್ರ-ಚಿಕ್ಕಕೋಲಿಗ ಗ್ರಾಮದ ಮಧ್ಯೆ ರಸ್ತೆ ಬದಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಪೇಪರ್ ರಾಶಿ
ಹೊಸಕೋಟೆ-ಜಂಗಮಕೋಟೆ ಹೆದ್ದಾರಿಯ ಇ. ಮುತ್ಸಂದ್ರ-ಚಿಕ್ಕಕೋಲಿಗ ಗ್ರಾಮದ ಮಧ್ಯೆ ರಸ್ತೆ ಬದಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಪೇಪರ್ ರಾಶಿ   

ಸೂಲಿಬೆಲೆ: ಸಮೀಪದ ಹೊಸಕೋಟೆ- ಜಂಗಮಕೋಟೆ ರಸ್ತೆ ಬದಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಪೇಪರ್, ಕೈಗಾರಿಕೆಗಳ ತ್ಯಾಜ್ಯದ ವಸ್ತುಗಳು ಹೇರಳವಾಗಿ ಸುರಿದಿದ್ದು ರಸ್ತೆಯುದ್ದಕ್ಕೂ ಕಸದ ರಾಶಿಗಳು ಅಲ್ಲಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿವೆ.

ದೇಶದಾದ್ಯಂತ 150 ನೇ ಗಾಂಧಿ ಜಯಂತಿಯನ್ನು ಸ್ವಚ್ಛತಾ ದಿವಸವನ್ನಾಗಿ ಆಚರಿಸಲಾಗಿದ್ದು, ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಭಾರತದ ಕಲ್ಪನೆಯನ್ನು ಕೇಂದ್ರ ಸರ್ಕಾರ ದೇಶದ ಮುಂದಿಟ್ಟಿರುವ ಸಂದರ್ಭದಲ್ಲಿಯೇ ಹಲವಾರು ಕಡೆ ಕಸ ಮತ್ತು ಪ್ಲಾಸ್ಟಿಕ್ ಸಮಸ್ಯೆ ತಾಂಡವವಾಡುತ್ತಿರುವುದು ಹೊಸಕೋಟೆ-ಜಂಗಮಕೋಟೆ ಹೆದ್ದಾರಿಯ ಬದಿಯಲ್ಲಿ ಕಾಣುತ್ತಿದೆ.

ಪ್ಲಾಸ್ಟಿಕ್ ಹಾಗೂ ಕಸ ಮುಕ್ತ ಕಲ್ಪನೆ ಈ ಭಾಗದಲ್ಲಿ ಕಡತಕ್ಕೆ ಸಿಮೀತವಾಗಿರುವುದು ಕಂಡುಬರುತ್ತಿದೆ ಎಂದು ಸ್ಥಳೀಯರೊಬ್ಬರು ದೂರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.