
ವಿಜಯಪುರ (ದೇವನಹಳ್ಳಿ): ಬೈಕ್‍ನಲ್ಲಿ ಚಲಿಸುತ್ತಿದ್ದ ವೇಳೆ ಮರದ ಕೊಂಬೆ ಬಿದ್ದು ಮೃತಪಟ್ಟಿದ್ದ ಪಟ್ಟಣದ 17ನೇ ವಾರ್ಡ್ ಯುವಕ ವೆಂಕಟ ವರುಣ್ ಕುಟುಂಬಕ್ಕೆ ಪುರಸಭೆಯಿಂದ ಶುಕ್ರವಾರ ₹1ಲಕ್ಷ ಪರಿಹಾರದ ಚೆಕ್ ಅನ್ನು ಪುರಸಭೆ ಅಧ್ಯಕ್ಷೆ ಭವ್ಯ ಮಹೇಶ್ ವಿತರಿಸಿದರು.
ಮುರಳಿಕೃಷ್ಣ ಅವರ ಪುತ್ರ ವೆಂಕಟವರುಣ್ ಅವರು ಕಳೆದ ಮೇ 9ರಂದು ಪಟ್ಟಣದ ದೇವನಹಳ್ಳಿ ರಸ್ತೆ ಬಸ್ ನಿಲ್ದಾಣದ ಬಳಿ ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಆಕಸ್ಮಿಕವಾಗಿ ಮರದ ಕೊಂಬೆ ಬಿದ್ದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ ಎಂದು ಪುರಸಭೆ ಅಧ್ಯಕ್ಷೆ ಭವ್ಯ ಮಹೇಶ್ ತಿಳಿಸಿದರು.
ಮೃತನ ಕುಟುಂಬದವರು ಆರ್ಥಿಕ ಪರಿಹಾರಕ್ಕಾಗಿ ಪುರಸಭೆಗೆ ಮನವಿ ಸಲ್ಲಿಸಿದ್ದರು. ಸಭೆಯಲ್ಲಿ ಈ ಕುರಿತು ಎಲ್ಲ ಸದಸ್ಯರು ಚರ್ಚಿಸಿ ಸರ್ವಾನುಮತದ ಒಪ್ಪಿಗೆಯಿಂದ ಆರ್ಥಿಕ ಸಹಾಯವಾಗಲೆಂದು ₹1ಲಕ್ಷ ಚೆಕ್ ಅನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ, ಉಪಾಧ್ಯಕ್ಷೆ ತಾಜುನ್ನೀಸಾಮಹಬೂಬ್ ಪಾಷಾ, ಸದಸ್ಯರಾದ ಬೈರೇಗೌಡ, ನಂದಕುಮಾರ್, ಮುಖಂಡ ಮಹೇಶ್, ಮೃತನ ಕುಟಂಬದ ಸದಸ್ಯರು, ಪುರಸಭೆ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.