ADVERTISEMENT

ಸೂಲಿಬೆಲೆ: ಅಕ್ರಮ ಬಡಾವಣೆ ತೆರವು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 2:28 IST
Last Updated 8 ಅಕ್ಟೋಬರ್ 2020, 2:28 IST
ಸೂಲಿಬೆಲೆ ಹೋಬಳಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಅಕ್ರಮ ಬಡಾವಣೆಗಳನ್ನು ತೆರವುಗೊಳಿಸಿದರು
ಸೂಲಿಬೆಲೆ ಹೋಬಳಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಅಕ್ರಮ ಬಡಾವಣೆಗಳನ್ನು ತೆರವುಗೊಳಿಸಿದರು   

ಸೂಲಿಬೆಲೆ: ಹೋಬಳಿಯ ಸೂಲಿಬೆಲೆ, ಗಿಡ್ಡಪ್ಪನಹಳ್ಳಿ ಮತ್ತು ಬತ್ತಿಗಾನಹಳ್ಳಿ ಸರ್ವೆ ನಂಬರ್ ಜಮೀನುಗಳಲ್ಲಿ ಅಕ್ರಮವಾಗಿ ನಿರ್ಮಾಣವಾಗಿದ್ದ ಬಡಾವಣೆಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳು ತೆರವುಗೊಳಿಸಿದರು.

‘ಸೂಲಿಬೆಲೆ ಸರ್ವೆ ನಂಬರ್ 25, ಗಿಡ್ಡಪ್ಪನಹಳ್ಳಿ 36/2 ಹಾಗೂ ಬತ್ತಿಗಾನಹಳ್ಳಿಯ 7/2, 7/3 ನಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಲಾಗಿದ್ದ ಬಡಾವಣೆಗಳನ್ನು ತೆರವುಗೊಳಿಸಲಾಗಿದ್ದು, ಹಂತ ಹಂತವಾಗಿ ತೆರವುಗೊಳಿಸುವ ಕಾರ್ಯ ಮುಂದುವರಿಯಲಿದೆ’ ಎಂದರು.

ಸೂಲಿಬೆಲೆ ಗ್ರಾಮಕ್ಕೆ ಸೇರಿದ ಸರ್ವೆ ನಂಬರ್ ಜಮೀನುಗಳಲ್ಲಿ ಸುಮಾರು 27 ಅನಧಿಕೃತ ಬಡಾವಣೆಗಳು ನಿರ್ಮಾಣಗೊಂಡಿವೆ ಎಂದು ಕಂದಾಯ ಇಲಾಖೆಯ ಅಧಿಕಾರಿ ತಿಳಿಸಿದರು.

ADVERTISEMENT

ಸೂಲಿಬೆಲೆ ಹೋಬಳಿಯ ರಾಜಸ್ವ ನಿರೀಕ್ಷಕ ವಲೀಜಾನ್, ಗ್ರಾಮ ಲೆಕ್ಕಿಗರಾದ ನ್ಯಾನಮೂರ್ತಿ, ರಫೀಕ್, ಅನುಪಮಾ, ಲಕ್ಷ್ಮಣ್, ಚಕ್ರವರ್ತಿ ಮತ್ತು ಕಂದಾಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.