ADVERTISEMENT

ದೊಡ್ಡಬಳ್ಳಾಪುರ: ಅಕ್ರಮ ತೆರವು ಕಾರ್ಯಾಚರಣೆ

ಗ್ರಾಮಾಂತರ ಜಿಲ್ಲೆಯ ವಿವಿಧೆಡೆ ಬಡಾವಣೆ ತೆರವು ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 2:40 IST
Last Updated 8 ಅಕ್ಟೋಬರ್ 2020, 2:40 IST
ಹೊನ್ನಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಬಡಾವಣೆಗಳನ್ನು ತಹಶೀಲ್ದಾರ್ ಟಿ.ಎಸ್.ಶಿವರಾಜ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು
ಹೊನ್ನಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಬಡಾವಣೆಗಳನ್ನು ತಹಶೀಲ್ದಾರ್ ಟಿ.ಎಸ್.ಶಿವರಾಜ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು   

ಕನಸವಾಡಿ (ದೊಡ್ಡಬಳ್ಳಾಪುರ), ಸೂಲಿಬೆಲೆ: ಅಲ್ಲಲ್ಲಿ ಅಕ್ರಮ ಬಡಾವಣೆ ತೆರವು ಕಾರ್ಯ ಮುಂದುವರಿಸಿರುವ ಅಧಿಕಾರಿ ಗಳು ಬುಧವಾರ ಕನಸವಾಡಿ ಮತ್ತು ಸೂಲಿಬೆಲೆಯಲ್ಲಿ ತೆರವು ಕಾರ್ಯ ನಡೆಸಿದರು.

ಮಂಗಳವಾರ ದೊಡ್ಡಬಳ್ಳಾಪುರ ತಾಲ್ಲೂಕಿನ ಹೊನ್ನಾವರ ಗ್ರಾಮ ಸರ್ವೆ ನಂ.73ರಲ್ಲಿ 3 ಎಕರೆ, ನಾಗೇನಹಳ್ಳಿ ಗ್ರಾಮದ ಸರ್ವೆ ನಂ.54/9ರಲ್ಲಿ 9.20 ಎಕರೆ ಹಾಗೂ ಕೆಂಜಿಗನಹಳ್ಳಿ ಸರ್ವೆ ನಂ.69/1ರಲ್ಲಿ 1.31 ಎಕರೆ, ಸರ್ವೆ ನಂ.69/2ರಲ್ಲಿ 3 ಎಕರೆ ಸೇರಿ ಒಟ್ಟಾರೆ 17 ಎಕರೆ 11 ಗುಂಟೆ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಬಡಾವಣೆ ತೆರವುಗೊಳಿಸಲಾಗಿದೆ.

‘ಸದನ ಸಮಿತಿ ನಿರ್ದೇಶನ ಹಾಗೂ ಜಿಲ್ಲಾಧಿಕಾರಿ ಆದೇಶದಂತೆ ತಾಲ್ಲೂಕಿನ ಅನಧಿಕೃತ ಬಡಾವಣೆಗಳು ಅಂದರೆ ಭೂ ಪರಿವರ್ತನೆ ಆಗದೇ ಇರುವ ಹಾಗೂ ನಗರ ಯೋಜನಾ ಪ್ರಾಧಿಕಾರದ ಅನುಮತಿ ಪಡೆಯದೇ ಇರುವ ಬಡಾವಣೆಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ’ ಎಂದು ತಹಶೀಲ್ದಾರ್ ಟಿ.ಎಸ್.ಶಿವರಾಜ್ ತಿಳಿಸಿದ್ದಾರೆ.

ADVERTISEMENT

ಮಧುರೆ ಹೋಬಳಿ ರಾಜಸ್ವ ನಿರೀಕ್ಷಕ ಮುನಿರಾಜು ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.