ADVERTISEMENT

ದೇವನಹಳ್ಳಿ: ಸಂವಿಧಾನದಡಿ ಸರ್ವರಿಗೂ ಸೌಲಭ್ಯ: ರಾಜೇಶ್ವರಿ ಭಾಸ್ಕರ್

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 5:26 IST
Last Updated 27 ಜನವರಿ 2023, 5:26 IST
ಶಾಲಾ ವಿದ್ಯಾರ್ಥಿಗಳು ಹೆಣ್ಣು ಭ್ರೂಣ ಹತ್ಯೆ ತಡೆ ಕುರಿತು ನೃತ್ಯ ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಿದರು
ಶಾಲಾ ವಿದ್ಯಾರ್ಥಿಗಳು ಹೆಣ್ಣು ಭ್ರೂಣ ಹತ್ಯೆ ತಡೆ ಕುರಿತು ನೃತ್ಯ ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಿದರು   

ವಿಜಯಪುರ(ದೇವನಹಳ್ಳಿ): ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಗುರುವಾರ ಗಣರಾಜ್ಯೋತ್ಸವ ಸಮಾರಂಭ ಅದ್ದೂರಿಯಾಗಿ ನೆರವೇರಿತು.

ತಳಿರುತೋರಣ, ಬಣ್ಣ ಬಣ್ಣದ ಕಾಗದಗಳಿಂದ ವೇದಿಕೆಯನ್ನು ಅಲಂಕಾರ ಮಾಡಲಾಗಿತ್ತು. ಪುರಸಭಾ ಕಾರ್ಯಾಲಯ, ಪೊಲೀಸ್ ಠಾಣೆ ಸೇರಿದಂತೆ ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.

ಮಹಾತ್ಮ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್, ಭಾರತ ಮಾತೆಯ ಭಾವಚಿತ್ರವುಳ್ಳ ಪಲ್ಲಕ್ಕಿಯನ್ನು ಬ್ಯಾಂಡ್ ಸೆಟ್‌ನೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಪುರಸಭಾ ಅಧ್ಯಕ್ಷೆ ರಾಜೇಶ್ವರಿ ಭಾಸ್ಕರ್ ಧ್ವಜಾರೋಹಣ ಮಾಡಿದರು. ಶಾಲಾ ವಿದ್ಯಾರ್ಥಿಗಳು ಪಥ ಸಂಚಲನ ಹಾಗೂ ಧ್ವಜ ವಂದನೆ ಸಲ್ಲಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ADVERTISEMENT

ಅಂಗನವಾಡಿ ಕೇಂದ್ರದ ಮಕ್ಕಳು ರಾಷ್ಟ್ರನಾಯಕರು, ರೈತರ ಪೋಷಾಕುಗಳಲ್ಲಿ ಬಂದು ಗಮನ ಸೆಳೆದರು. ಪುರಸಭಾ ಸದಸ್ಯ ವಿ. ನಂದಕುಮಾರ್ ಅವರು ಮಕ್ಕಳಿಗೆ ಬ್ಯಾಗ್‌ ವಿತರಿಸಿದರು.

ಮುಖ್ಯಾಧಿಕಾರಿ ವಿ. ಮೋಹನ್ ಕುಮಾರ್ ಮಾತನಾಡಿ, ‘ಸಂವಿಧಾನ ಜಾರಿಯಿಂದ ಎಲ್ಲಾ ವರ್ಗದ ಜನರು ಸಮಾನವಾಗಿ ಶಿಕ್ಷಣ ಕಲಿಯುತ್ತಿದ್ದೇವೆ. ದೇಶದಲ್ಲಿ ಸಂವಿಧಾನ ಜಾರಿಗೆ ಬಂದ ಮೇಲೆಯೇ ದೇಶದ ಪ್ರತಿಯೊಬ್ಬರಿಗೂ ಸಮಾನತೆ, ಸ್ವಾತಂತ್ರ್ಯ, ಧರ್ಮ, ಸಂಸ್ಕೃತಿ, ಶಿಕ್ಷಣ ಮತ್ತು ಇತರೆ ಹಕ್ಕುಗಳು ಸಿಕ್ಕಿವೆ’ ಎಂದು ತಿಳಿಸಿದರು.

ಪುರಸಭಾ ಅಧ್ಯಕ್ಷೆ ರಾಜೇಶ್ವರಿ ಭಾಸ್ಕರ್ ಮಾತನಾಡಿದರು. ಪುರಸಭಾ ಸದಸ್ಯ ಎ.ಆರ್. ಹನೀಫ್‌ ಉಲ್ಲಾ, ಕನಕರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.